ಜಾಗತಿಕ ತಾಪಮಾನ ಏರಿಕೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ನೀಡಲಾದ ಗ್ರಾಫಿಕಲ್ ವಿವರಣೆ. ಈ ವರದಿಗೆ ನಂತರ ಮಾಡಲಾದ ಸುಧಾರಣೆಗಳ ಪ್ರಕಾರ ಅಪಾಯಗಳು ಗಣನೀಯವಾಗಿ ಹೆಚ್ಚಾದವು.ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಮತ್ತು ಹವಾಗುಣ ಬದಲಾವಣೆಗಳು ಈ ಲೇಖನದಲ್ಲಿ "ಜಾಗತಿಕ ತಾಪಮಾನ ಏರಿಕೆ" ಮತ್ತು "ಹವಾಗುಣ ಬದಲಾವಣೆ" - ಈ ಎರಡೂ ಪದಗಳನ್ನು ಒಂದರ ಬದಲಾಗಿ ಇನ್ನೊಂದರಂತೆ ಬಳಸಲಾಗಿದೆ. ಪರಿಸರ ಮತ್ತು ಮಾನವ ಜೀವನದ ಬಗ್ಗೆ ಕಳಕಳಿ ಮೂಡಿಸಿವೆ. ಉಪಕರಣ ಮೂಲದ ಉಷ್ಣತಾ ದಾಖಲೆಗಳು, ಏರುತ್ತಿರುವ ಸಮುದ್ರಮಟ್ಟಗಳು, ಹಾಗೂ ಉತ್ತರ ಗೋಳಾರ್ಧದಲ್ಲಿ ಕಡಿಮೆಯಾಗುತ್ತಿರುವ ಹಿಮವೇ ಮುಂತಾದುವುಗಳನ್ನು ಹವಾಗುಣ ಬದಲಾವಣೆಯ ಸಾಕ್ಷಿಗಳನ್ನಾಗಿ ಬಳಸಿಕೊಳ್ಳಲಾಗಿದೆ ಪ್ರಕಾರ, "20ನೇ ಶತಮಾನದ ಮಧ್ಯಭಾಗದಿಂದಲೂ ಗಮನಿಸಲಾಗುತ್ತಿರುವ ಹೆಚ್ಚಿನಜಾಗತಿಕ ಸರಾಸರಿ ತಾಪಮಾನದಲ್ಲಿನ ಏರಿಕೆಗೆ ಇರಬಹುದಾದ ಕಾರಣ ಎಂದರೆ ಮಾನವ ಹಸಿರುಮನೆ ಅನಿಲಗಳ ಸಾಂದ್ರತೆಗಳಲ್ಲಿ ಕಂಡುಬರುತ್ತಿರುವ ಹೆಚ್ಚಳ". ಭವಿಷ್ಯದ ಹವಾಗುಣ ಬದಲಾವಣೆಗಳು ಜಾಗತಿಕ ತಾಪಮಾನ ಏರಿಕೆಯ ಹೆಚ್ಚಳ (ಎಂದರೆ, ಸರಾಸರಿ ಜಾಗತಿಕ ಉಷ್ಣತೆಯ ಪ್ರವೃತ್ತಿಯಲ್ಲಿ ಏರಿಕೆ), ಸಮುದ್ರಮಟ್ಟದಲ್ಲಿ ಏರಿಕೆ, ಹಾಗೂ ಕೆಲವು ಹವಾಮಾನ ವೈಪರೀತ್ಯದ ಘಟನೆಗಳ ಪುನರಾವರ್ತನೆಯಲ್ಲಿ ಆಗಬಹುದಾದ ಏರಿಕೆಗಳನ್ನು ಒಳಗೊಂಡಿರುವುದೆಂದು ಊಹೆ ಮಾಡಲಾಗಿದೆ. ಪರಿಸರವ್ಯವಸ್ಥೆಗಳು ಹವಾಗುಣ ಬದಲಾವಣೆಗಳಿಗೆ ಹೆಚ್ಚು ಭೇದ್ಯವಾಗಿರುವುದನ್ನು ಗಮನಿಸಲಾಗಿದೆ. ಭವಿಷ್ಯದ ಹವಾಗುಣ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಮಾನವ ವ್ಯವಸ್ಥೆಗಳು ವೈವಿಧ್ಯಮಯ ಸಾಮರ್ಥ್ಯಗಳನ್ನು ಹೊಂದಿರುವುದನ್ನು ಕಾಣಬಹುದು.ಭವಿಷ್ಯದ ಹವಾಗುಣದಲ್ಲಿ ದೊಡ್ಡ ಬದಲಾವಣೆಗಳ ಅಪಾಯವನ್ನು ಕಡಿಮೆಮಾಡುವ ಸಲುವಾಗಿ, ಹಲವಾರು ದೇಶಗಳು ತಮ್ಮ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯನೀತಿಗಳನ್ನು ರೂಪಿಸಿಕೊಂಡು ಜಾರಿಗೆ ತಂದಿವೆ. == ಸ್ಥೂಲ ಅವಲೋಕನ == ಕಳೆದ ಸುಮಾರು ನೂರು ವರ್ಷಗಳ ಯಾಂತ್ರಿಕ ಉಷ್ಣತಾ ದಾಖಲೆಗಳನ್ನು ಅವಲೋಕಿಸಿದರೆ ಕಂಡುಬರುವ ಹವಾಗುಣ ಪ್ರವೃತ್ತಿಯು ಸರಾಸರಿ ಜಾಗತಿಕ ತಾಪಮಾನದಲ್ಲಿ ಏರಿಕೆಯನ್ನು, ಎಂದರೆ ಜಾಗತಿಕ ತಾಪಮಾನ ಏರಿಕೆಯನ್ನು ತೋರಿಸುತ್ತದೆ. ಗಮನಿಸಲಾದ ಇತರ ಬದಲಾವಣೆಗಳೆಂದರೆ: ಆರ್ಕ್‌ಟಿಕ್‍ನ ಕುಗ್ಗುವಿಕೆ, ಆರ್ಕ್‌ಟಿಕ್‍ ಮೀಥೇನ್ ಹೊರಸೂಸುವಿಕೆ, ಪರ್ಮಾಫ್ರಾಸ್ಟ್ ಪ್ರದೇಶಗಳಿಂದ ಭೌತ ಇಂಗಾಲದ ಬಿಡುಗಡೆ ಹಾಗೂ ಕರಾವಳಿಯ ಹೂಳುಗಳಲ್ಲಿ ಆರ್ಕ್‌ಟಿಕ್‍ ಮೀಥೇನ್ ಹೊರಸೂಸುವಿಕೆ, ಮತ್ತು ಸಮುದ್ರಮಟ್ಟದಲ್ಲಿ ಏರಿಕೆ ಈ ಶತಮಾನದಲ್ಲಿ ಸರಾಸರಿ ಜಾಗತಿಕ ತಾಪಮಾನವು ಏರುವುದೆಂದು ಊಹೆ ಮಾಡಲಾಗಿದ್ದು, ಇದರಿಂದಾಗಿ ಹವಾಮಾನ ವೈಪರೀತ್ಯದ ಘಟನೆಗಳ ಪುನರಾವರ್ತನೆಯಲ್ಲಿ ಹೆಚ್ಚಳ ಮತ್ತು ಮಳೆಬೀಳುವಿಕೆಯ ಸಂವಿಧಾನಗಳಲ್ಲಿ ಬದಲಾವಣೆಗಳುಂಟಾಗುವ ಸಂಭವನೀಯತೆಗಳು ಹೆಚ್ಚಾಗಿವೆ. ಜಾಗತಿಕ ಮಟ್ಟದಿಂದ ಕೆಳಗಿಳಿದು ಪ್ರಾದೇಶಿಕ ಮಟ್ಟಕ್ಕೆ ಬರುವುದಾದಲ್ಲಿ ಇಲ್ಲಿಯೂ ಹವಾಗುಣ ಹೇಗೆ ಬದಲಾಗುವುದೆನ್ನುವುದರ ಬಗ್ಗೆ ಅತಂತ್ರ ನಿಲುವುಗಳು ಹೆಚ್ಚುತ್ತಿರುವುದನ್ನು ಕಾಣಬಹುದು. ಈ ತಾಪಮಾನ ಏರಿಕೆಯ ಊಹಿಸಲಾಗದ ಪರಿಣಾಮಗಳು ಉಂಟಾಗುವ ಸಂಭವನೀಯತೆಯು ಹವಾಗುಣ ಬದಲಾವಣೆಯ ವೇಗ, ಪರಿಮಾಣ, ಮತ್ತು ಕಾಲಮಿತಿಯನ್ನು ಅವಲಂಬಿಸಿದೆ.ಹವಾಗುಣ ಬದಲಾವಣೆಯ ಕೆಲವು ಭೌತಿಕ ಪರಿಣಾಮಗಳು ಖಂಡಗಳ ಮತ್ತು ಜಾಗತಿಕ ಮಟ್ಟದವಾಗಿದ್ದು ಇವನ್ನು ಮತ್ತೆ ಸರಿಪಡಿಸಲು ಸಾಧ್ಯವಾಗದು. 21ನೇ ಶತಮಾನದ ಕೊನೆಯ ವೇಳೆಗೆ ಸಮುದ್ರಮಟ್ಟವು 18ರಿಂದ 59 ಸೆ.ಮೀ(7.1ರಿಂದ 23.2 ಇಂಚು)ಗಳಷ್ಟು ಏರುವುದೆಂದು ಎಣಿಕೆಹಾಕಲಾಗಿದೆ. ವೈಜ್ಞಾನಿಕಪ್ರಜ್ಞೆಯ ಕೊರತೆಯಿಂದಾಗಿ ಈ ಸಮುದ್ರಮಟ್ಟದ ಏರಿಕೆಯ ಎಣಿಕೆಯಲ್ಲಿ ಮಂಜುಗೆಡ್ಡೆಯ ಎಲ್ಲಾ ಹಾಳೆಗಳ ಕೊಡುಗೆಯನ್ನು ಪರಿಗಣಿಸಲಾಗಿಲ್ಲ ಈ ಶತಮಾನದಲ್ಲಿಯೇ Circulationನ ವೇಗವು ತಗ್ಗುವ ಸಾಧ್ಯತೆ ಹೆಚ್ಚಾಗಿದೆ, ಆದರೂ ಅಟ್ಲಾಂಟಿಕ್ ಮತ್ತು ಯುರೋಪ್ ಖಂಡಗಳ ಉಷ್ಣತೆಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಬಹುಶಃ ಹೆಚ್ಚಾಗಿಯೇ ಇರುತ್ತದೆ. 1–4°Cಯಷ್ಟು ಜಾಗತಿಕ ತಾಪಮಾನ ಏರಿಕೆಯುಂಟಾದಲ್ಲಿ (1990–2000ಕ್ಕೆ ಸಂಬಂಧಿಸಿದಂತೆ), ಗ್ರೀನ್‍ಲ್ಯಾಂಡ್ ಮಂಜುಗಡ್ಡೆ ಹೊದಿಕೆಯ ಕೆಲಭಾಗವು ಕರಗಲು ಹಲವಾರು ಶತಮಾನಗಳು ಅಥವಾ ಸಾವಿರ ವರ್ಷಗಳನ್ನು ತೆಗೆದುಕೊಳ್ಳಬಹುದಾದ ಮಿತವಾದ ಸಾಧ್ಯತೆಗಳಿವೆ. ಪಶ್ಚಿಮ ಅಂಟಾರ್ಕ್‌ಟಿಕ್ ಮಂಜುಗಡ್ಡೆ ಹೊದಿಕೆಯ ಪಾರ್ಶ್ವಿಕ ಕರಗುವಿಕೆಯನ್ನೂ ಪರಿಗಣಿಸುವುದಾದಲ್ಲಿ ಸಮುದ್ರದ ಮಟ್ಟದಲ್ಲಿ 4–6 ಮೀಟರ‍್ಗಳಷ್ಟು ಅಥವಾ ಅದಕ್ಕಿಂತ ಜಾಸ್ತಿ ಏರಿಕೆಯುಂಟಾಗಬಹುದು ಮಾನವ ವ್ಯವಸ್ಥೆಗಳ ಮೇಲೆ ಹವಾಗುಣ ಬದಲಾವಣೆಗಳ ಪರಿಣಾಮವು ಬಹುಶಃ ಅಸಮಾನವಾಗಿ ಹಂಚಿಕೆಯಾಗಬಹುದು. ಕೆಲವು ಪ್ರದೇಶಗಳು ಮತ್ತು ವಲಯಗಳಿಗೆ ಲಾಭಗಳುಂಟಾಗುವುದು ಮತ್ತು ಕೆಲವು ಕಡೆಗಳಲ್ಲಿ ಬಹಳ ನಷ್ಟಗಳುಂಟಾಗುವುದು ಕಂಡುಬರಬಹುದೆಂದು ಅಂದಾಜು ಮಾಡಲಾಗಿದೆ. ಆದರೆ ತಾಪಮಾನ ಏರಿಕೆಯ ಮಟ್ಟವು ಹೆಚ್ಚಾಗುತ್ತಿದ್ದಂತೆ (2–3°Cಗಿಂತ ಹೆಚ್ಚು, 1990ರ ಮಟ್ಟಕ್ಕೆ ಸಂಬಂಧಿಸಿದಂತೆ) ಲಾಭಗಳು ಕಡಿಮಾಯಾಗುತ್ತ ನಷ್ಟಗಳು ಹೆಚ್ಚಾಗುವ ಸಾಧ್ಯತೆಗಳೇ ಜಾಸ್ತಿ. ಕೆಳಗಿನ ಅಕ್ಷಾಂಶರೇಖಾ ಪ್ರದೇಶಗಳು ಮತ್ತು ಕಡಿಮೆ ಅಭಿವೃದ್ಧಿಗೊಂಡಿರುವ ಪ್ರದೇಶಗಳಿಗೆ ಹವಾಗುಣ ಬದಲಾವಣೆಗಳಿಂದ ಹೆಚ್ಚಿನ ತೊಂದರೆಗಳುಂಟಾಗಬಹುದು. ಮಾನವಿಕ ವ್ಯವಸ್ಥೆಗಳು ಹವಾಗುಣ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೆನ್ನಬಹುದಾದರೂ ಈ ಹೊಂದಿಕೊಳ್ಳುವಿಕೆಗೆ ತೆರಬೇಕಾದ ಬೆಲೆಯ ಅಂದಾಜು ಯಾರಿಗೂ ಇಲ್ಲ ಮತ್ತು ಇದು ಬಹಳ ದುಬಾರಿಯಾಗಿರುವ ಸಾಧ್ಯತೆಗಳೇ ಜಾಸ್ತಿಯಾಗಿವೆ. ಹವಾಗುಣ ಬದಲಾವಣೆಗಳಿಂದಾಗಿ ಪರಿಸರವ್ಯವಸ್ಥೆಗಳ ವೈವಿಧ್ಯತೆ ಕಡಿಮೆಯಾಗುವುದರ ಜತೆಗೇ ಹಲವಾರು ಜೀವಸಂಕುಲಗಳ ಅಳಿವು ಕೂಡ ಉಂಟಾಗಬಹುದು. ಜೈವಿಕ ಹಾಗೂ ಭೂಭೌತಿಕ ವ್ಯವಸ್ಥೆಗಳ ಹೊಂದಿಕೊಳ್ಳುವಿಕೆಯ ಸಾಮರ್ಥ್ಯವು ಮಾನವ ವ್ಯವಸ್ಥೆಗಳಿಗಿಂತ ಕಡಿಮೆಯಿದೆಯೆಂದು ಊಹಿಸಲಾಗಿದೆ. == ಭೌತಿಕ ಪರಿಣಾಮಗಳು -ಹವಾಮಾನದ ಮೇಲಿನ ಪರಿಣಾಮಗಳು == ಉಷ್ಣತೆಯ ಏರಿಕೆಯಿಂದಾಗಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆಯಾದರೂಚಂಡಮಾರುತ/ಬಿರುಗಾಳಿ/ತುಫಾನುಗಳ ಮೇಲೆ ಏನು ಪರಿಣಾಮವಾಗಬಹುದೆಂದು ಖಚಿತವಾಗಿ ತಿಳಿದುಬಂದಿಲ್ಲ. ಉಷ್ಣವಲಯಾಧಿಕ ಚಂಡಮಾರುತಗಳು ಪಾರ್ಶ್ವಿಕವಾಗಿಉಷ್ಣತಾ ಏರಿಳಿತಗಳ ಪ್ರಮಾಣ]]ದ ಮೇಲೆ ಅವಲಂಬಿತವಾಗಿದ್ದು, ಅಲ್ಲಿನ ಧ್ರುವಪ್ರದೇಶವು ಬಾಕಿಯ ಗೋಲಾರ್ಧಕ್ಕಿಂತ ಹೆಚ್ಚಿನ ಉಷ್ಣತೆಯನ್ನು ಹೊಂದುತ್ತ ಹೋಗುವ ಕಾರಣದಿಂದಾಗಿ ಉತ್ತರ ಗೋಳಾರ್ಧದಲ್ಲಿ ತಗ್ಗಬಹುದೆಂದು ಅಂದಾಜು ಮಾಡಲಾಗಿದೆ. === ಹವಾಮಾನ ವೈಪರೀತ್ಯ === ಜಾಗತಿಕ ತಾಪಮಾನ ಏರಿಕೆಯು ಹವಾಮಾನ ವೈಪರೀತ್ಯದಂತಹ ನೈಸರ್ಗಿಕ ವಿನಾಶಗಳ ಕೆಲವು ಪ್ರವೃತ್ತಿಗಳಿಗೆ ಕೆಲಮಟ್ಟಿಗೆ ಕಾರಣವಾಗಿರಬಹುದು. ಹವಾಮಾನ ಬದಲಾವಣೆಯ ನಾಲ್ಕು ಪ್ರಮುಖ ವಿಷಯಗಳನ್ನು ಆಧರಿಸಿ, ವರದಿಯು ಹಲವಾರು ಸಾಧ್ಯತೆಗಳನ್ನು ಪಟ್ಟಿಮಾಡಿದೆ. ಹಲವಾರು ಭೂಪ್ರದೇಶಗಳ ಮೇಲೆ ಸೆಖೆಯ ಕಾಲಮಾನ ಅಥವಾಶಾಖದ ಅಲೆಗಳು ಗಣನೀಯವಾಗಿ ಹೆಚ್ಚಾಗಿ ಮರುಕಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಕೆಲವು ಸಾಧ್ಯತೆಗಳೆಂದರೆ: ಹೆಚ್ಚಿನ ಪ್ರದೇಶಗಳಲ್ಲಿ ಬರ ಉಂಟಾಗಬಹುದು. ಉಷ್ಣವಲಯದ ಸೈಕ್ಲೋನ್ ಚಟುವಟಿಕೆಗಳಲ್ಲಿ ಉತ್ಕಟವಾದ ಏರಿಕೆಯುಂಟಾಗುವುದು. ಸಮುದ್ರಮಟ್ಟದಲ್ಲಿ ವಿಪರೀತ ಏರಿಕೆಯಿಂದ ಹೆಚ್ಚಾಗುವ ತಗ್ಗುಬೀಳುವಿಕೆಗಳು(ಸುನಾಮಿಗಳನ್ನು ಹೊರತುಪಡಿಸಿ) ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವಂತಹ ಹರಿಕೇನ್ ಒತ್ತಡದ ಶಕ್ತಿವ್ಯತ್ಯಯಸೂಚಿಯೇ ಮೊದಲಾದ ಚಂಡಮಾರುತ ಬಲಗಳೂ ಹೆಚ್ಚಾಗುತ್ತಿವೆಕೆರಿ ಎಮ್ಯಾನುಯೆಲ್ ಬರೆದಿರುವ ಪ್ರಕಾರ ಹರಿಕೇನ್ ಒತ್ತಡ ಶಕ್ತಿವ್ಯತ್ಯಯದ ಹೆಚ್ಚಳವು ತಾಪಮಾನದ ಜತೆಗೆ ಸಂಬಂಧವನ್ನು ಹೊಂದಿದ್ದು, ಇದರ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆಯನ್ನು ಪ್ರತಿಫಲಿಸುತ್ತದೆ. ಆದರೆ, ಎಮ್ಯಾನುಯೆಲ್ ಅವರ ಕರೆಂಟ್ ಮಾಡೆಲ್ ಔಟ್‍ಪು‍ಟ್ ಅನ್ನು ಬಳಸಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಉಂಟಾಗುತ್ತಿರುವ ಶಕ್ತಿವ್ಯತ್ಯಯಗಳ ಏರಿಕೆಗೆ ಜಾಗತಿಕ ತಾಪಮಾನ ಏರಿಕೆಯೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ ಹರಿಕೇನ್ ಮಾದರಿಗಳನ್ನು ಬಳಸಿನೋಡಿದಾಗಲೂ ಅವು ಇದೇ ರೀತಿಯ ಫಲಿತಾಂಶಗಳನ್ನು ನೀಡಿದವು ಮತ್ತು ಇದರಿಂದ ಹೆಚ್ಚು ಉಷ್ಣತೆಯ, ಹೆಚ್ಚು- ಇರುವ ಸ್ಥಿತಿಗಳಲ್ಲಿ ಉಂಟುಮಾಡಲಾದ ಕೃತಕ ಹರಿಕೇನ್‍ಗಳು ಹೆಚ್ಚು ತೀವ್ರವಾಗಿದ್ದರೂ ಅವುಗಳ ಮರುಕಳಿಸುವಿಕೆ ಕಡಿಮೆಯಾಗುವುದೆಂದು ತಿಳಿದುಬಂದಿತು ಜಾಗತಿಕವಾಗಿ, 4 ಅಥವಾ 5ನೇ ವರ್ಗಗಳ - ಎಂದರೆ ನಿಮಿಷಕ್ಕೆ 56 ಮೀಟರ್‍ಗಳಿಗಿಂತ ಹೆಚ್ಚಿನ ವೇಗ ಹೊಂದಿರುವಂಥ ಹರಿಕೇನ್ಗಳ ಸಂಖ್ಯೆ 1970ರ ದಶಕದಲ್ಲಿ 20% ಇದ್ದುದು 1990ರ ದಶಕದಲ್ಲಿ ಹೆಚ್ಚಾಗಿ 35% ಆಗಿತ್ತು. ಹರಿಕೇನ್‍ಗಳಿಂದ USನಲ್ಲಿ ಉಂಟಾಗುವ ಮಳೆಯು ಇಪ್ಪತ್ತನೇ ಶತಮಾನದಲ್ಲಿ ಶೇಕಡಾ 7ರಷ್ಟು ಹೆಚ್ಚಾಗಿದೆ. ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವೇ ಅಥವಾ Oscillationನ ದೆಸೆಯಿಂದ ಉಂಟಾಗಿದೆಯೇ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕೆಲವೊಂದು ಅಧ್ಯಯನಗಳ ಪ್ರಕಾರ ಸಮುದ್ರಮೇಲ್ಮೈ ಉಷ್ಣತೆಯ ಏರಿಕೆಯು ಹವೆಯ ತಡೆಕೊಯ್ಯುವಿಕೆಯ ಏರಿಕೆಗೆ ಕಾರಣವಾಗಿ ಇದರಿಂದ ಹರಿಕೇನ್ ಚಟುವಟಿಕೆಗಳಲ್ಲಿ ಮಿತವಾದ ಬದಲಾವಣೆಯುಂಟಾಗಬಹುದು ಅಥವಾ ಯಾವುದೇ ಬದಲಾವಣೆ ಉಂಟಾಗದೇ ಇರಬಹುದು. ಹೋಯೋಸ್ . (2006) 1970–2004ರ ಅವಧಿಯಲ್ಲಿ ಕ್ಯಾಟಗರಿ 4 ಮತ್ತು 5ರ ಹರಿಕೇನ್‌ಗಳ ಸಂಖ್ಯೆಯಲ್ಲಿ ಉಂಟಾಗುತ್ತಿರುವ ಹೆಚ್ಚಳ ಹಾಗೂ ಸಮುದ್ರಮೇಲ್ಮೈ ಉಷ್ಣತೆಯ ಪ್ರವೃತ್ತಿಗಳಿಗೆ ನೇರವಾದ ಸಂಬಂಧವನ್ನು ಕಲ್ಪಿಸಿದ್ದಾರೆ. ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಅನಾಹುತಗಳಿಗೆ ಪ್ರಮುಖ ಕಾರಣವೆಂದರೆ ಜನಸಂಖ್ಯಾಸ್ಫೋಟ ಮತ್ತು ಭವಿಷ್ಯದಲ್ಲಿ ಇಂತಹ ಅನಾಹುತಗಳ ಸಂಖ್ಯೆಯಲ್ಲಿ ಏರಿಕೆಯುಂಟಾಗುವುದಕ್ಕೆ ಹವಾಗುಣ ಬದಲಾವಣೆಗಿಂತ ಹೆಚ್ಚಾಗಿ ಸಾಮಾಜಿಕ ಬದಲಾವಣೆಗಳು ಪ್ರಮುಖ ಕಾರಣವಾಗುತ್ತವೆ.ನ ವಿವರಣೆಯ ಪ್ರಕಾರ “ಇಲ್ಲಿಯವರೆಗಿನ ಉಷ್ಣವಲಯ ಸೈಕ್ಲೋನ್ ಹವಾಗುಣ ದಾಖಲೆಗಳಲ್ಲಿ ಮಾನವ ಸಂಕೇತ ಕಂಡುಬರುವುದರ ಪರವಾದ ಮತ್ತು ವಿರುದ್ಧವಾದ ಸಾಕ್ಷಿಗಳಿದ್ದರೂ ಕೂಡ, ಈ ವಿಷಯದ ಬಗ್ಗೆ ಒಂದು ಪಕ್ಕಾ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಇದರ ಜತೆಗೇ ಅವರು “ಯಾವುದೇ ಒಂದು ಉಷ್ಣವಲಯ ಸೈಕ್ಲೋನ್‍ಗೆ ಹವಾಗುಣ ಬದಲಾವಣೆಯೇ ನೇರ ಕಾರಣವೆಂದು ಹೇಳಲು ಸಾಧ್ಯವಿಲ್ಲ." ಎಂದೂ ಸ್ಪಷ್ಟಪಡಿಸಿದ್ದಾರೆ NOAAನ ಥಾಮಸ್ ನಟ್‍ಸನ್ ಮತ್ತು ರಾಬರ್ಟ್ ಇ.ಟ್ಯುಲೀಯಾ 2004ರಲ್ಲಿ ನೀಡಿದ ವಿವರಣೆಯ ಪ್ರಕಾರ ಹಸಿರುಮನೆ ಅನಿಲಗಳಿಂದ ಉಂತಾಗುವ ತಾಪಮಾನ ಏರಿಕೆಯು ವಿನಾಶಕಾರೀ ಕ್ಯಾಟಗರಿ-5 ಚಂಡಮಾರುತಗಳಿಗೆ ಕಾರಣವಾಗಬಹುದೆಂದು ಹೇಳಿದ್ದಾರೆ. 2008ರಲ್ಲಿ, ನಟ್‍ಸನ್ . ರ ಸಂಶೋಧನೆಯ ಪ್ರಕಾರ ಅಟ್ಲಾಂಟಿಕ್ ಹರಿಕೇನ್ ಮತ್ತು ಉಷ್ಣವಲಯ ಚಂಡಮಾರುತಗಳ ಮರುಕಳಿಕೆಗಳು ಭವಿಷ್ಯದ ಹಸಿರುಮನೆ ಅನಿಲಗಳಿಂದ ಉಂಟಾಗಬಹುದಾದ ತಾಪಮಾನ ಏರಿಕೆಯಿಂದ ಕಡಿಮೆಯಾಗಬಹುದು ಎಂದು ಕಂಡುಹಿಡಿಯಲಾಯಿತು. ವೆಚ್ಚಿ ಮತ್ತು ಸೋಡೆನ್ ತಮ್ಮ ಸಂಶೋಧನೆಯಲ್ಲಿ ಹವೆಯ ಕೊಯ್ಯುವಿಕೆಯಲ್ಲಿ ಉಂಟಾಗುವ ಏರಿಕೆಯುಉಷ್ಣವಲಯ ಸೈಕ್ಲೋನ್ಗಳನ್ನು ತಡೆಗಟ್ಟುವುದು ಮಾತ್ರವಲ್ಲದೆ, ಜಾಗತಿಕ ತಾಪಮಾನ ಏರಿಕೆಯ ಮಾದರಿ ಪ್ರಕ್ಷೇಪಣಗಳಲ್ಲಿ ಕೂಡ ಬದಲಾಗುವುದೆಂದು ಕಂಡುಹಿಡಿದರು. ವಾಕರ್ ಪರಿಚಲನೆಯ ವೇಗ ಕುಂದುವಿಕೆಯ ಜತೆಗೆ ಉಷ್ಣವಲಯದ ಅಟ್ಲಾಂಟಿಕ್ ಮತ್ತು ಪೂರ್ವ ಪೆಸಿಫಿಕ್‍ನಹವೆಯ ಕೊಯ್ಯುವಿಕೆ]]ಗಳ ವಿಕ್ಷೇಪಿತ ಏರಿಕೆಗಳನ್ನು ಮತ್ತು ಪಶ್ಚಿಮ ಹಾಗೂ ಮಧ್ಯ ಪೆಸಿಫಿಕ್‍ಗಳಲ್ಲಿನ ಹವೆಯ ಕೊಯ್ಯುವಿಕೆಯಲ್ಲಿನ ಇಳಿಕೆಗಳನ್ನು ಸಂಯೋಜಿಸಲಾಗುತ್ತದೆ ಈ ಅಧ್ಯಯನವು ಅಟ್ಲಾಂಟಿಕ್ ಮತ್ತು ಪೂರ್ವ ಪೆಸಿಫಿಕ್ ಹರಿಕೇನ್‍ಗಳ ಮೇಲೆ ವಾಯುಮಂಡಲದ ಉಷ್ಣತೆಯ ಏರಿಕೆ ಮತ್ತು ಆರ್ದ್ರತೆಗಳ ಒಟ್ಟು ಪರಿಣಾಮದ ಬಗ್ಗೆಯಾಗಲೀ, ಅಟ್ಲಾಂಟಿಕ್ ಹವೆಕೊಯ್ಯುವಿಕೆಯ ಬಗ್ಗೆ ಮಾದರಿ ಪ್ರಕ್ಷೇಪಿತ ಏರಿಕೆಗಳ ಬಗ್ಗೆಯಾಗಲೀ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ.| ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ಗಣನೀಯ ಅಪಾಯ ಮತ್ತು ಮಾಮೂಲಿಗಿಂತ-ಸ್ವಲ್ಪ-ಹೆಚ್ಚೂಕಡಿಮೆಯಾಗಿರುವ ಹವಾಮಾನದಿಂದ ಉಂಟಾಗಬಹುದಾದ ಗಮನಾರ್ಹ ಅಪಾಯ - ಇವೆರಡೂ ಒಂದೇ ಅರ್ಥವನ್ನು ನೀಡುವುದಿಲ್ಲ. ಆದರೆ ಸಾಕ್ಷ್ಯಾಧಾರಗಳು ವಿಪರೀತ ಹವಾಮಾನ ಮತ್ತು ಮಿತವಾದ ಮಳೆಹುಯ್ಯುವಿಕೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ತಾಪಮಾನದಲ್ಲಿನ ಏರಿಕೆಗಳು ಭೂಪ್ರದೇಶಗಳ ಮೇಲೆ ಹೆಚ್ಚು ಗಾಢವಾದ ಪ್ರಚಲನವನ್ನುಂಟುಮಾಡುವುದಲ್ಲದೆ ಆಗಾಗ ಹೆಚ್ಚಾಗಿ ಅತಿ ವಿಷಮವಾದ ಚಂಡಮಾರುತಗಳನ್ನುಂಟುಮಾಡುತ್ತವೆಯೆಂದು ಊಹಿಸಲಾಗಿದೆ === ಹೆಚ್ಚಿದ ಆವಿಯಾಗುವಿಕೆ === ಬೌಲ್ಡರ್, ಕೊಲೊರಾಡೋದಲ್ಲಿ ಹೆಚ್ಚುತ್ತಿರುವ ನೀರಿನ ಆವಿ 20ನೇ ಶತಮಾನದ ಕಾಲದಲ್ಲಿ ಪ್ರಪಂಚದೆಲ್ಲೆಡೆ ಆವಿಯಾಗುವಿಕೆಯ ಪ್ರಮಾಣವು ಕಡಿಮೆಯಾಗಿದೆ; ಹಲವಾರು ಜನರು ಇದಕ್ಕೆ ಜಾಗತಿಕ ನಿಸ್ತೇಜತೆಯೇ ಸರಿಯಾದ ವಿವರಣೆಯೆಂದು ನಂಬುತ್ತಾರೆ. ಹವಾಗುಣ ಹೆಚ್ಚು ಬೆಚ್ಚಗಾಗುತ್ತ ಜ್ಘಾತಿಕ ನಿಸ್ತೇಜತೆಯ ಕಾರಣಗಳು ಕಡಿಮೆಯಾದಾಗ,ಸಾಗರಗಳ ಉಷ್ಣತೆಗಳು ಹೆಚ್ಚುವುದರಿಂದ ಆವಿಯಾಗುವಿಕೆಯೂ ಹೆಚ್ಚಾಗುವುದು. ಆದರೆ ನಮ್ಮ ವಿಶ್ವವು ಒಂದು ಮುಚ್ಚಿದ ವ್ಯವಸ್ಥೆಯಾದ್ದರಿಂದ ಇದು ಭಾರೀ ಮಳೆ ಮತ್ತು ಹೆಚ್ಚು ಸವಕಳಿಗೆ ಕಾರಣವಾಗುವುದು. ಈ ಸವಕಳಿಯು ಭೇದ್ಯವಾದ ಉಷ್ಣವಲಯ ಪ್ರದೇಶಗಳಲ್ಲಿ (ವಿಶೇಷವಾಗಿ ಆಫ್ರಿಕಾದಲ್ಲಿ) ಮರುಭೂಮೀಕರಣವನ್ನು ಉಂಟುಮಾಡಬಹುದು. ಇದೇ ವೇಳೆಗೆ, ಬೇರೆ ಪ್ರದೇಶಗಳಲ್ಲಿ, ಹೆಚ್ಚಿದ ಮಳೆಯಿಂದಾಗಿ ಒಣಮರುಭೂಮಿಗಳಾಗಿದ್ದ ಪ್ರದೇಶಗಳಲ್ಲಿ ಕಾಡುಗಳು ಬೆಳೆದುಕೊಳ್ಳಬಹುದು.ವಿಜ್ಞಾನಿಗಳಿಗೆ ದೊರಕಿರುವ ಸಾಕ್ಷ್ಯಾಧಾರಗಳ ಪ್ರಕಾರ ಆವಿಯಾಗುವಿಕೆಯ ಹೆಚ್ಚಳವು ಜಾಗತಿಕ ತಾಪಮಾನ ಏರಿಕೆ ಮುಂದುವರಿದಂತೆ ಹೆಚ್ಚು ವಿಪರೀತ ಹವಾಮಾನಕ್ಕೆ ಕಾರಣವಾಗುವುದು. IPCCಯ ಮೂರನೇ ವಾರ್ಷಿಕ ವರದಿಯ ಪ್ರಕಾರ: "...ಜಾಗತಿಕ ಸರಾಸರಿ ನೀರು ಆವಿಯ ಕೇಂದ್ರೀಕರಣ ಮತ್ತು ಇದ್ದಕ್ಕಿದ್ದಂತೆ ಸುರಿವ ಮಳೆ - ಈ ಎರಡೂ 21ನೇ ಶತಮಾನದಲ್ಲಿ ಹೆಚ್ಚಾಗುತ್ತವೆ. 21ನೇ ಶತಮಾನದ ದ್ವಿತೀಯಾರ್ಧ ಭಾಗದಲ್ಲಿ ಉತ್ತರದ ಮಧ್ಯಭಾಗದಿಂದ ಆರಂಭವಾಗಿ ಎತ್ತರದ ಅಕ್ಷಾಂಶಗಳವರೆಗಿನ ಪ್ರದೇಶಗಳಲ್ಲಿ ಚಳಿಗಾಲದ ಅಂಟಾರ್ಕ್‍ಟಿಕಾದಲ್ಲಿ ಇದ್ದಕ್ಕಿದ್ದಂತೆ ಸುರಿವ ಮಳೆಯ ಪ್ರಮಾಣ ಜಾಸ್ತಿಯಾಗುವುದೆಂದು ಎಣಿಕೆಹಾಕಲಾಗಿದೆ. ಕೆಳಗಿನ ಅಕ್ಷಾಂಶಪ್ರದೇಶಗಳಲ್ಲಿ ಆಯಾ ಭೂಪ್ರದೇಶಗಳಿಗೆ ಅನುಗುಣವಾಗಿ ಇದು ಹೆಚ್ಚುವ ಅಥವಾ ತಗ್ಗುವ ಸಾಧ್ಯತೆಗಳಿವೆ. ಇದ್ದಕ್ಕಿದ್ದಂತೆ ಸುರಿವ ಮಳೆಯ ಸರಾಸರಿ ಹೆಚ್ಚಾಗುವ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯು ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿವೆ. === ಹೆಚ್ಚಿನ ಹವಾಮಾನ ವೈಪರೀತ್ಯದ ಬೆಲೆ === ವಿವರಣೆಯಂತೆ, “ಇತ್ತೀಚೆಗೆ ಉಷ್ಣವಲಯದ ಸೈಕ್ಲೋನ್‍ಗಳಿಂದ ಉಂಟಾಗುತ್ತಿರುವ ಸಾರ್ವತ್ರಿಕ ಪರಿಣಾಮಗಳು ಹೆಚ್ಚುತ್ತಿರುವುದಕ್ಕೆ ಕರಾವಳೀ ಪ್ರದೇಶಗಳಲ್ಲಿ ಏರುತ್ತಿರುವ ಜನಸಂಖ್ಯೆ ಮತ್ತು ಸೌಕರ್ಯಗಳು ಒಂದು ಮುಖ್ಯ ಕಾರಣ. ಪೀಲ್ಕೆ . ರವರು(2008) ಯು.ಎಸ್.ನ ಮುಖ್ಯ ಭೂಪ್ರದೇಶದ ಹರಿಕೇನ್ ವಿನಾಶದ 1900–2005ರಿಂದ 2005ರವರೆಗಿನ ಮೌಲ್ಯಗಳನ್ನು ಕ್ರಮಬದ್ಧಗೊಳಿಸಿದ ನಂತರ ಅವರಿಗೆ ಅದರ ಗರಿಷ್ಟ ವಿನಾಶದ ಪ್ರವೃತ್ತಿಯಲ್ಲಿ ಯಾವುದೇ ಹೆಚ್ಚಳವಾಗಿರುವುದು ಕಂಡುಬರಲಿಲ್ಲ. 1970ರ ಮತ್ತು 1980ರ ದಶಕಗಳು ಇತರ ದಶಕಗಳಿಗೆ ಹೋಲಿಸಿದಾಗ ತಮ್ಮ ಅತ್ಯಂತ ಕಡಿಮೆ ಮೊತ್ತದ ವಿನಾಶದಿಂದ ಗಮನ ಸೆಳೆದವು. 1996–2005ರ ದಶಕವು ಕಳೆದ ಹನ್ನೊಂದು ದಶಕಗಳಲ್ಲಿ ಅತಿ ಹೆಚ್ಚು ವಿನಾಶವನ್ನೆದುರಿಸಿದ ದಶಕಗಳಲ್ಲಿ ಎರಡನೇ ಸ್ಥಾನದಲ್ಲಿದೆ ಹಾಗೂ 1926–1935ರ ದಶಕದ ವಿನಾಶದಿಂದ ಉಂಟಾದ ನಷ್ಟವು ಮಾತ್ರ ಇದನ್ನು ಮೀರಿಸುವಂತಿದೆ. $157 ಬಿಲಿಯನ್‍ನಷ್ಟು (ಕ್ರಮಬದ್ಧಗೊಳಿಸಲಾದ) ನಷ್ಟವನ್ನುಂಟುಮಾಡಿದ 1926ರ ಮಯಾಮಿ ಹರಿಕೇನ್ ಅತಿ ಹೆಚ್ಚು ವಿನಾಶಕಾರಿಯಾದ ಏಕೈಕ ಚಂಡಮಾರುತವಾಗಿದೆ ನ ಪ್ರಕಾರ “ನಿರ್ಮಾಣದ ವೆಚ್ಚದಲ್ಲಿ ಏರಿಕೆ, ಕಟ್ಟಡಗಳ ಸಂಖ್ಯೆಯಲ್ಲಿ ಏರಿಕೆ ಮತ್ತು ಅವುಗಳ ಗುಣಲಕ್ಷಣಗಳಲ್ಲಿನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಪ್ರತೀ 10 ವರುಷಗಳಲ್ಲಿ ವಿನಾಶಗಳಿಂದ ಉಂಟಾಗಬಹುದಾದ ನಷ್ಟದ ವೆಚ್ಚವು ದ್ವಿಗುಣವಾಗುವುದೆಂದು ನಿರೀಕ್ಷಿಸಬಹುದು. ನೀಡಿರುವ ಹೇಳಿಕೆಯ ಪ್ರಕಾರ ಇಂಗಾಲದ ಹೊರಸೂಸುವಿಕೆಯನ್ನು ಮಿತಗೊಳಿಸುವುದರಿಂದ ಪ್ರಕಾರ ಈಗಿನ ಲೆಕ್ಕಾಚಾರದಂತೆ ಉಷ್ಣವಲಯ ಸೈಕ್ಲೋನ್‍ಗಳಿಂದ ಉಂಟಾಗಬಹುದಾದ ಅಧಿಕತಮ ವಾರ್ಷಿಕ ವೆಚ್ಚವನ್ನು 2080ರ ದಶಕದ ವೇಳೆಗೆ ಶೇಕಡಾ 80ರಷ್ಟು ಕಡಿಮೆಮಾಡಬಹುದು. ಕರಾವಳಿಪ್ರದೇಶಗಳು ಮತ್ತು ಪ್ರವಾಹಪ್ರಸ್ತಭೂಮಿಗಳಂತಹ ಅರಕ್ಷಿತಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕೂಡ ಈ ವೆಚ್ಚವನ್ನು ಅಧಿಕಗೊಳಿಸುತ್ತದೆ. ABIನ ಪ್ರಕಾರ ಭೇದ್ಯತೆಯ ಕಡಿಮೆಯಾಗುವಿಕೆಯನ್ನು ಹವಾಗುಣ ಬದಲಾವಣೆಯ ಅನಿವಾರ್ಯ ಪರಿಣಾಮಗಳಿಗೆ ಆರೋಪಿಸಬಹುದು. ಉದಾಹರಣೆಗೆ, ಹೆಚ್ಚು ಸ್ಥಿತಿಸ್ಥಾಪಕ ಕಟ್ಟಡಗಳು ಮತ್ತು ಉತ್ತಮಪಡಿಸಲಾದ ಪ್ರವಾಹ ಭದ್ರತೆಗಳ ಮೂಲಕ ಭವಿಷ್ಯದ ವೆಚ್ಚಗಳಲ್ಲಿ ಗಮನಾರ್ಹ ಮಟ್ಟದ ಉಳಿತಾಯವನ್ನು ಮಾಡಬಹುದು. === ಸ್ಥಳೀಯ ಹವಾಗುಣ ಬದಲಾವಣೆ === ಮಾರ್ಚ್ 2004ರಲ್ಲಿ ಬ್ರೆಜಿಲ್ ಅನ್ನು ಹೊಕ್ಕ ಮೊತ್ತಮೊದಲ ದಕ್ಷಿಣ ಅಟ್ಲಾಂಟಿಕ್ ಹರಿಕೇನ್ "ಕ್ಯಾಟರೀನಾ"]] ಕಳೆದ 50 ವರ್ಷಗಳಲ್ಲಿ ಉತ್ತರ ಗೋಳಾರ್ಧದಲ್ಲಿರುವ ಆರ್ಕ್‍ಟಿಕ್ ಪ್ರದೇಶದ ದಕ್ಷಿಣ ಭಾಗದಲ್ಲಿ(4,000,000 ಜನರ ವಾಸಸ್ಥಾನ) 1 ° ಯಿಂದ 3 ° (1.8 ° ಇಂದ 5.4 °)ಯಷ್ಟು ತಾಪಮಾನ ಏರಿಕೆ ಕಂಡುಬಂದಿದೆ. ಕೆನಡಾ, ಅಲಾಸ್ಕಾ ಹಾಗೂ ರಷ್ಯಾಗಳಲ್ಲಿ ಪರ್ಮಾಫ್ರಾಸ್ಟ್ನ ಆರಂಭಿಕ ಕರಗುವಿಕೆಯು ಕಂಡುಬರುತ್ತಿದೆ. ಇದರಿಂದಾಗಿ ಪರಿಸರ ವ್ಯವಸ್ಥೆಗಳಿಗೆ ತೊಂದರೆಯುಂಟಾಗಬಹುದು ಹಾಗೂ ಈ ಪ್ರದೇಶಗಳಲ್ಲಿ ಹೆಚ್ಚಾಗುವ ಬ್ಯಾಕ್ಟೀರಿಯಾ ಚಟುವಟಿಕೆಗಳಿಂದಾಗಿ ಇವು ಇಂಗಾಲದ ಸಿಂಕ್ಗಳಾಗುವ ಬದಲು ಇಂಗಾಲದ ಮೂಲಗಳಾಗಿ ಬದಲಾಗಲು ಕಾರಣವಾಗುತ್ತವೆ.ಪೂರ್ವ ಸೈಬೀರಿಯಾದ ಪರ್ಮಾಫ್ರಾಸ್ಟ್‌ನ ಬದಲಾವಣೆಗಳ ಬಗೆಗಿನ ಅಧ್ಯಯನವೊಂದರ ( ನಲ್ಲಿ ಮುದ್ರಿತವಾಗಿದೆ) ಪ್ರಕಾರ ಇದು ದಕ್ಷಿಣ ಪ್ರಾಂತ್ಯಗಳಲ್ಲಿ ಕ್ರಮೇಣವಾಗಿ ಕಣ್ಮರೆಯಾಗುತ್ತಿದೆ ಮತ್ತು ಇದರಿಂದಾಗಿ 1971ರಿಂದ ಸೈಬೀರಿಯಾನ ಸುಮಾರು 11000 ಸರೋವರಗಳ ಪೈಕಿ ಶೇಕಡಾ 11ರಷ್ಟು ನಷ್ಟವುಂಟಾಗಿದೆ . ಇದೇ ಹೊತ್ತಿಗೆ, ಪಶ್ಚಿಮ ಸೈಬೀರಿಯಾದ ಪರ್ಮಾಫ್ರಾಸ್ಟ್ ಕರಗುವಿಕೆ ಈಗಷ್ಟೆ ಆರಂಭವಾಗಿದ್ದು ಇದು ಹಲವಾರು ಸರೋವರಗಳ ಹುಟ್ಟಿಗೆ ಕಾರಣವಾಗಿದೆ. ಈ ಸರೋವರಗಳು ಮುಂದೆ ಪೂರ್ವದ ಸರೋವರಗಳಂತೆಯೇ ಕಣ್ಮರೆಯಾಗಲಿವೆ. ಇದಷ್ಟೇ ಅಲ್ಲ, ಪರ್ಮಾಫ್ರಾಸ್ಟ್‌ನ ಕರಗುವಿಕೆಯಿಂದ ಉಂಟಾಗಬಹುದಾದ ಇನ್ನೊಂದು ತೊಂದರೆಯೆಂದರೆ ಕರಗುತ್ತಿರುವ ಪರ್ಮಾಫ್ರಾಸ್ಟ್ ಪೀಟ್ ಜೌಗುಪ್ರದೇಶಗಳಿಂದ ಮೀಥೇನ್ ಹೊರಸೂಸುವಿಕೆ. ಮಾರ್ಚ್ 2004ಕ್ಕಿಂತ ಮೊದಲು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಯಾವುದೇ ಉಷ್ಣವಲಯ ಸೈಕ್ಲೋನ್ ಕಂಡುಬಂದಿರಲಿಲ್ಲ. ಭೂಮಧ್ಯರೇಖೆಯ ದಕ್ಷಿಣಭಾಗದಲ್ಲಿ ಉಂಟಾದ ಮೊತ್ತಮೊದಲನೆಯ ಅಟ್ಲಾಂಟಿಕ್ ಸೈಕ್ಲೋನ್ ಮಾರ್ಚ್ 28, 2004ರಂದು ಬ್ರೆಜಿಲ್‌ನ ಮೇಲೆ 40 / (144 /) ವೇಗದಲ್ಲಿ ದಾಳಿಮಾಡಿತು, ಆದರೂ ಕೆಲವು ಬ್ರೆಜಿಲಿಯನ್ ಕಾಲಜ್ಞರು ಅದು ಒಂದು ಹರಿಕೇನ್ ಆಗಿತ್ತು ಎಂದು ಒಪ್ಪಿಕೊಳ್ಳುವುದಿಲ್ಲ. ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಮತ್ತೂ 1,600 ಕಿ.ಮೀ(1,000 ಮೈಲುಗಳು)ಗಳಷ್ಟು ವಿಸ್ತರಿಸಬೇಕಾಗಿ ಬರಬಹುದು. ಆದರೆ ಈ ಹರಿಕೇನ್ ಹವಾಗುಣ ಬದಲಾವಣೆಗೆ ಸಂಬಂಧಪಟ್ಟಿದೆಯೇ ಇಲ್ಲವೇ ಎಂಬುದರ ಬಗ್ಗೆ ಒಮ್ಮತವಿಲ್ಲ,ಆದರೆ ಒಂದು ಹವಾಗುಣ ಮಾದರಿಯು 21ನೇ ಶತಮಾನದ ಕೊನೆಯ ವೇಳೆಗೆ ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉಷ್ಣವಲಯ ಸೈಕ್ಲೋನ್‌ಗಳ ಹುಟ್ಟುವಿಕೆ ಮತ್ತು ಚಲನವಲನಗಳು ಹೆಚ್ಚಾಗುವುದೆಂದು ತೋರಿಸಿದವು. === ಗ್ಲೇಶಿಯರ್ ಹಿಮ್ಮೆಟ್ಟುವಿಕೆ ಮತ್ತು ಕಣ್ಮರೆ === 1970ರ ನಂತರದ ಪರ್ವತ ಗ್ಲೇಶಿಯರ್‌ಗಳ ಸಾಂದ್ರತೆಯಲ್ಲಿನ ಬದಲಾವಣೆಗಳ ಬಗ್ಗೆ ಒಂದು ನಕ್ಷೆ. ಕಿತ್ತಳೆ ಮತ್ತು ಕೆಂಪು ಎಂದರೆ ತೆಳುವಾಗುವುದು, ನೀಲಿ ಎಂದರೆ ದಪ್ಪವಾಗುವುದು. ಐತಿಹಾಸಿಕ ಸಮಯದಲ್ಲಿ, ಈಗ ಪುಟ್ಟ ಹಿಮಯುಗವೆಂದು ಕರೆಯಲಾಗುವ 1550 ರಿಂದ 1850ರವರೆಗಿನ ಶೈತ್ಯಕಾಲದಲ್ಲಿ ಗ್ಲೇಶಿಯರ್‌ಗಳು ಹುಟ್ಟಿಕೊಂಡವು. ಕ್ರಮೇಣ, ಸುಮಾರು 1940ರವರೆಗೂ ಹವಾಗುಣ ಬೆಚ್ಚಗಾದಂತೆ ಪ್ರಪಂಚದ ಎಲ್ಲೆಡೆ ಗ್ಲೇಶಿಯರ್‌ಗಳು ಹಿಮ್ಮೆಟ್ಟತೊಡಗಿದವು. 1950ರಿಂದ 1980ರವರೆಗೆ ಉಂಟಾದ ಕೊಂಚ ಜಾಗತಿಕ ಶೈತ್ಯದಿಂದಾಗಿ ಗ್ಲೇಶಿಯರ್ ಹಿಮ್ಮೆಟ್ಟುವಿಕೆ ಕಡಿಮೆಯಾಯಿತು ಮತ್ತು ಕೆಲವು ಕಡೆ ವಾಪಾಸು ಮರುಸ್ಥಿತಿಗೆ ತೆರಳಿತು. 1980ರಿಂದ ಈಚೆಗೆ ಗ್ಲೇಶಿಯರ್ ಹಿಮ್ಮೆಟ್ಟುವಿಕೆ ಬಹಳ ವೇಗವಾಗಿ, ಸರ್ವವ್ಯಾಪಿಯಾಗಿ ಆಗುತ್ತಿರುವುದು ಮಾತ್ರವಲ್ಲದೆ, ಪ್ರಪಂಚದ ಹಲವಾರು ಗ್ಲೇಶಿಯರ್‌ಗಳ ಅಸ್ತಿತ್ವಕ್ಕೇ ಅಪಾಯವನ್ನೊಡ್ಡಿದೆ. ಈ ಪ್ರಕ್ರಿಯೆಯು 1995ರಿಂದ ಈಚೆಗೆ ಗಣನೀಯವಾಗಿ ಹೆಚ್ಚಾಗಿದೆ. ಆರ್ಕ್‌ಟಿಕ್ ಹಾಗೂ ಅಂಟಾರ್ಕ್‌ಟಿಕ್‌ಗಳ ಮಂಜುಗಡ್ಡೆಯ ಟೊಪ್ಪಿಗೆಗಳು ಮತ್ತು ಮಂಜುಗಡ್ಡೆ ಹಾಳೆಗಳನ್ನು ಹೊರತುಪಡಿಸಿದರೆ, 19ನೇ ಶತಮಾನದಿಂದೀಚೆಗೆ ಪ್ರಪಂಚದಾದ್ಯಂತ ಇರುವ ಗ್ಲೇಶಿಯರ್ಗಳ ಒಟ್ಟು ಮೇಲ್ಮೈಪ್ರದೇಶವು ಶೇಕಡಾ 50ರಷ್ಟು ಕಡಿಮೆಯಾಗಿದೆಸದ್ಯಕ್ಕೆ ಗ್ಲೇಶಿಯರ್ ಹಿಮ್ಮೆಟ್ಟುವಿಕೆಯ ಪ್ರಮಾಣಗಳು ಮತ್ತು ಅಧಿಕ ಸಮತೋಲನ ನಷ್ಟಗಳು ಆಂಡಿಸ್, ಆಲ್ಪ್ಸ್, ಪೈರಿನೀಸ್, ಹಿಮಾಲಯ, ರಾಕೀ ಪರ್ವತಗಳು ಮತ್ತು ನಾರ್ಥ್ ಕ್ಯಾಸ್ಕೇಡ್ಸ್ಗಳಲ್ಲಿ ಹೆಚ್ಚಾಗುತ್ತಿವೆ. ಗ್ಲೇಶಿಯರ್‌ಗಳ ಅಳಿವಿನಿಂದಾಗಿ ಭೂಕುಸಿತ, ದಿಢೀರ್ ಪ್ರವಾಹಗಳು ಮತ್ತು ಗ್ಲೇಶಿಯಲ್ ಸರೋವರಗಳ ಹೊರವುಕ್ಕುವಿಕೆಯಂಥ ನೇರ ಪರಿಣಾಮಗಳಲ್ಲದೆ ನದಿಗಳ ನೀರಿನ ಹರಿವಿನ ವಾರ್ಷಿಕ ಏರಿಳಿತ ಕೂಡ ಹೆಚ್ಚುತ್ತದೆ. ಬೇಸಿಗೆಯಲ್ಲಿ ಗ್ಲೇಶಿಯರ್‌ಗಳ ಗಾತ್ರ ಕುಗ್ಗುತ್ತಿದ್ದಂತೆಯೆ ಅವುಗಳ ಚಲನೆಯೂ ಕಡಿಮೆಯಾಗುತ್ತದೆ ಮತ್ತು ಈ ಪ್ರಕ್ರಿಯೆಯನ್ನು ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಗಮನಿಸಲಾಗಿದೆ. ಗ್ಲೇಶಿಯರ್‌ಗಳ ಮೇಲಿನ ಹಿಮದ ಹೊದಿಕೆಯು ಅವುಗಳನ್ನು ಕರಗುವಿಕೆಯಿಂದ ರಕ್ಷಿಸುವುದರಿಂದ ಅವು ಹೆಚ್ಚಿನ ಮಳೆಯ ವರ್ಷಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಬೆಚ್ಚಗಿನ ಹಾಗೂ ಒಣ ವರ್ಷಗಳಲ್ಲಿ ಗ್ಲೇಶಿಯರ್‌ಗಳು ಕಡಿಮೆ ಮಳೆಯನ್ನು ಹೆಚ್ಚಿನ ನೀರು ಕರಗುವಿಕೆಯಿಂದ ಸರಿಹೋಗಿಸುತ್ತವೆ ಇವುಗಳಲ್ಲಿ ಪ್ರಮುಖವಾದುವೆಂದರೆ ಮಧ್ಯ, ದಕ್ಷಿಣ, ಪೂರ್ವ ಮತ್ತು ಆಗ್ನೇಯ ಏಷ್ಯಾದ ಮುಖ್ಯ ಭೂಪ್ರದೇಶಗಳ ಪ್ರಮುಖ ನದಿಗಳ ಒಣಗಾಲದ ಪ್ರಮುಖ ನೀರಿನ ಮೂಲವನ್ನೊಳಗೊಂಡ ಹಿಂದೂಕುಶ್ ಮತ್ತು ಹಿಮಾಲಯ ಪರ್ವತಗಳ ಗ್ಲೇಶಿಯರ್ ಕರಗುವಿಕೆಗಳು. ಹೆಚ್ಚಿದ ಕರಗುವಿಕೆಯಿಂದಾಗಿ ಹಲವಾರು ದಶಕಗಳವರೆಗೆ ಹೆಚ್ಚಿನ ಹರಿವು ಉಂಟಾಗಬಹುದಾದರೂ ಆನಂತರ "ಭೂಮಿಯ ಕೆಲವು ಅತ್ಯಂತ ಜನಸಂಖ್ಯಾಭರಿತ ಪ್ರದೇಶಗಳು ನೀರಿನ ಕೊರತೆಯನ್ನು ಎದುರಿಸಬೇಕಾಗಿ ಬರಬಹುದು", ಏಕೆಂದರೆ ಮೂಲ ಗ್ಲೇಶಿಯರ‍್ಗಳು ಕರಗಿಹೋಗಿರುತ್ತವೆ.ಟಿಬೆಟ್‌ನ ಪ್ರಸ್ಥಭೂಮಿಯು ವಿಶ್ವದ ಮೂರನೇ ಅತಿದೊಡ್ಡ ಹಿಮ ಸಂಗ್ರಹಾಗಾರವಾಗಿದೆ. ಅಲ್ಲಿನ ಉಷ್ಣತೆಯು ಚೀನಾದ ಉಳಿದ ಭೂಭಾಗಕ್ಕಿಂತ ನಾಲ್ಕುಪಟ್ಟು ಹೆಚ್ಚಿನ ವೇಗದಲ್ಲಿ ಜಾಸ್ತಿಯಾಗುತ್ತಿದೆ ಹಾಗೂ ಇಲ್ಲಿ ಗ್ಲೇಶಿಯಲ್ ಹಿಮ್ಮೆಟ್ಟುವಿಕೆಯು ಪ್ರಪಂಚದ ಯಾವುದೇ ಭಾಗಕ್ಕಿಂತ ಹೆಚ್ಚುಪ್ರಮಾಣದಲ್ಲಿದೆ. ವಿಶೇಷವಾಗಿ ಉತ್ತರ ಅಮೆರಿಕಾದ ಪಶ್ಚಿಮಭಾಗ, ಫ್ರಾನ್ಜ್-ಜೋಸೆಫ್ ಲ್ಯಾಂಡ್, ಏಷ್ಯಾ, ಆಲ್ಪ್ಸ್, ಪೈರಿನೀಸ್, ಇಂಡೋನೇಶಿಯಾ ಮತ್ತು ಆಫ್ರಿಕಾ, ಹಾಗೂ ದಕ್ಷಿಣ ಅಮೆರಿಕಾದ ಉಷ್ಣವಲಯ ಮತ್ತು ಉಪ-ಉಷ್ಣವಲಯ ಪ್ರದೇಶಗಳಲ್ಲಿನ ಪರ್ವತ ಗ್ಲೇಶಿಯರ್‌ಗಳ ಹಿನ್ನಡೆಯಿಂದಾಗಿ 19ನೇ ಶತಮಾನದಿಂದೀಚೆಗೆ ಜಾಗತಿಕ ತಾಪಮಾನಗಳ ಏರಿಕೆಯ ಗುಣಮಟ್ಟಕ್ಕೆ ಬೆಂಬಲ ದೊರಕುವಂತಾಗಿದೆ. ಹಲವಾರು ಗ್ಲೇಶಿಯರ್‌ಗಳು ಈಗಾಗಲೇ ಕರಗಿಹೋಗಿರುವುದರಿಂದ ಈ ಪ್ರದೇಶಗಳಲ್ಲಿನ ಭವಿಷ್ಯದ ಜಲಸಂಪನ್ಮೂಲಗಳ ಬಗ್ಗೆ ಕಾಳಜಿಯನ್ನುಂಟುಮಾಡುತ್ತಿದೆ. ಉತ್ತರ ಅಮೆರಿಕಾದ ಪಶ್ಚಿಮ ಭಾಗದಲ್ಲಿ ಗಮನಿಸಲಾದ ಎಲ್ಲಾ 47 ನಾರ್ಥ್ ಕ್ಯಾಸ್ಕೇಡ್ ಗ್ಲೇಶಿಯರ್‌ಗಳು ಹಿಂದೆ ಸರಿಯುತ್ತಿವೆ === ಗ್ರೀನ್‍ಲ್ಯಾಂಡ್‌ನ ಹೆಲ್‌ಹೀಮ್ ಗ್ಲೇಶಿಯರ್‌ನ ಹಿಮ್ಮೆಟ್ಟುವಿಕೆ. === ಮಾನವ ಜನಸಂಖ್ಯೆಗಳ ಜತೆಗಿನ ಸಾಮೀಪ್ಯ ಮತ್ತು ಪ್ರಾಮುಖ್ಯತೆಗಳಿದ್ದರೂ, ಸಮಶೀತೋಷ್ಣ ವಲಯಗಳ ಪರ್ವತ ಮತ್ತು ಕಣಿವೆಗಳ ಗ್ಲೇಶಿಯರ್‌ಗಳು ಭೂಮಿಯ ಗ್ಲೇಶಿಯಲ್ ಹಿಮದ ಒಂದು ಸಣ್ಣ ಭಾಗವನ್ನು ಮಾತ್ರ ಆಕ್ರಮಿಸಿಕೊಂಡಿವೆ. ಇದರ ಸುಮಾರು ಶೇಕಡಾ 99ರಷ್ಟು ಭಾಗವು ಪೋಲಾರ್ ಮತ್ತು ಸಬ್‌ಪೋಲಾರ್ ಅಂಟಾರ್ಕ್‍ಟಿಕಾ ಹಾಗೂ ಗ್ರೀನ್‌ಲ್ಯಾಂಡ್‌ಗಳಲ್ಲಿದೆ. ಭೂಖಂಡಗಳಷ್ಟು ವಿಶಾಲವಾದ ಈ ನಿರಂತರವಾದ ಹಿಮದ ಹಾಳೆಗಳು ಅಥವಾ ಅದಕ್ಕಿಂತ ಹೆಚ್ಚು ದಪ್ಪನಾಗಿದ್ದು ಪೋಲಾರ್ ಮತ್ತು ಸಬ್‌ಪೋಲಾರ್ ಭೂಭಾಗಗಳನ್ನು ಆವರಿಸಿವೆ. ಒಂದು ಬೃಹತ್ ಸರೋವರದಿಂದ ಹೊರಗೆ ಹರಿಯುವ ನದಿಗಳ ಹಾಗೆ ಹಲವಾರು ಕೋಡಿಬಿದ್ದ ಗ್ಲೇಶಿಯರ್‌ಗಳು ಹಿಮವನ್ನು ಐಸ್ ಹಾಳೆಯ ಅಂಚುಗಳಿಂದ ಸಾಗರಕ್ಕೆ ಸಾಗಿಸುತ್ತವೆ. ಇಂಥ ಗ್ಲೇಶಿಯರ್‌ಗಳಲ್ಲಿ ಹಿಮ್ಮೆಟ್ಟುವಿಕೆಯಾಗುತ್ತಿದೆಯೆಂದು ಗಮನಿಸಲಾಗಿದೆ, ಮತ್ತು ಇದರಿಂದ ಹಿಮದ ಹರಿಯುವಿಕೆಯ ವೇಗವು ಹೆಚ್ಚಾಗುತ್ತದೆ. ಗ್ರೀನ್‌ಲ್ಯಾಂಡ್ನಲ್ಲಿ 2000ನೇ ವರ್ಷದ ನಂತರದ ಅವಧಿಯಲ್ಲಿ ಬಹಳ ಸಮಯದಿಂದ ಸ್ಥಾಯಿಯಾಗಿದ್ದ ಹಲವಾರು ಬಹಳ ವಿಶಾಲವಾದ ಗ್ಲೇಶಿಯರ್‌ಗಳಲ್ಲಿ ಹಿಮ್ಮೆಟ್ಟುವಿಕೆಯು ಕಂಡುಬಂದಿದೆ. ಹೆಲ್‌ಹೀಮ್, ಯಾಕೊಬ್‌ಶಾನ್ ಇಸ್‌ಬ್ರೇ ಹಾಗೂ ಕಾಂಗರ್ಡ್‌ಲಗ್‌ಸುವಾಕ್ ಎಂಬ ಮೂರು ಗ್ಲೇಶಿಯರ್‌ಗಳ ಅಧ್ಯಯನ ಮಾಡಲಾಗಿದ್ದು, ಈ ಗ್ಲೇಶಿಯರ್‌ಗಳು ಒಟ್ಟಾಗಿ ಗ್ರೀನ್‌ಲ್ಯಾಂಡ್ ಐಸ್ ಹಾಳೆಯ ಶೇಕಡಾ 16ರಷ್ಟು ಹಿಮವನ್ನು ಬರಿದುಮಾಡುತ್ತವೆ. 1950ರ ದಶಕ ಹಾಗೂ 1970ರ ದಶಕದ ಉಪಗ್ರಹ ಚಿತ್ರಗಳು ಮತ್ತು ವಾಯುಮಂಡಲದಿಂದ ತೆಗೆದ ಛಾಯಾಚಿತ್ರಗಳು ಗ್ಲೇಶಿಯರ್‌ನ ಮುಂಭಾಗವು ಹಲವಾರು ದಶಕಗಳವರೆಗೆ ಹಾಗೆಯೇ ಉಳಿದುಕೊಂಡಿರುವುದನ್ನು ತೋರಿಸುತ್ತವೆ. ಆದರೆ 2001ರಲ್ಲಿ ಇದು ವೇಗವಾಗಿ ಹಿಮ್ಮೆಟ್ಟಲು ಆರಂಭವಾಗಿ, 2001 ಮತ್ತು 2005ರ ನಡುವೆ 7.2 (4.5 )ನಷ್ಟು ಹಿಮ್ಮೆಟ್ಟಿತು. ಇದುದಿನದವರೆಗಿನ ತೀವ್ರಗತಿಯನ್ನು ತಲುಪಿದೆ.ಪಶ್ಚಿಮ ಗ್ರೀನ್‌ಲ್ಯಾಂಡ್‌ನ ಯಾಕೊಬ್‌ಶಾನ್ ಇಸ್‌ಬ್ರೇಯು 1950ರ ಕಾಲದಿಂದಲೂ ಸ್ಥಾಯೀ ಎಲ್ಲೆಯನ್ನು ಹೊಂದಿದ್ದು, ಸುಮಾರು 24 (79 )/ ವೇಗದಲ್ಲಿ ಚಲಿಸುತ್ತಿತ್ತು. ಈ ಗ್ಲೇಶಿಯರ್‌ನ ಹಿಮದ ಹೊರಚಾಚು 2000ದಲ್ಲಿ ಒಡೆಯಲು ಆರಂಭವಾಗಿದ್ದು, 2003ರ ಹೊತ್ತಿಗೆ ಸಂಪೂರ್ಣವಾಗಿ ನಶಿಸಿಹೋಯಿತು, ಮತ್ತು ಇದೇ ಹೊತ್ತಿಗೆ ಅದರ ಹಿಮ್ಮೆಟ್ಟುವಿಕೆಯ ವೇಗವು ದುಪ್ಪಟ್ಟಾಗಿ ಸುಮಾರು ದಿನದಷ್ಟಾಯಿತು === ಸಾಗರಗಳು === ಜಾಗತಿಕ ತಾಪಮಾನ ಏರಿಕೆಯಲ್ಲಿ ಸಾಗರಗಳ ಪಾತ್ರವು ಬಹಳ ಸಂಕೀರ್ಣವಾದದ್ದು. ಸಾಗರಗಳು ವಾಯುಮಂಡಲದಲ್ಲಿ ಹಾಗೆಯೇ ಉಳಿದುಕೊಳ್ಳಬಹುದಾಗಿದ್ದ ಬಹುತೇಕ ಇಂಗಾಲದ ಡೈ ಆಕ್ಸೈಡ್ ಅನ್ನು ಕರಗಿಸಿಕೊಳ್ಳುವ ತೊಟ್ಟಿಗಳ ಕೆಲಸ ಮಾಡುತ್ತವೆ, ಆದರೆ ಹೆಚ್ಚಿದ CO2ನ ಮಟ್ಟವು ಸಾಗರ ಆಮ್ಲೀಕರಣವುಂಟಾಗಲು ಕಾರಣವಾಗಿದೆ. ಮುಂದೆ, ಸಾಗರಗಳ ಉಷ್ಣತೆ ಜಾಸ್ತಿಯಾಗುತ್ತ ಹೊದ ಹಾಗೆ ಅವು ಹೆಚ್ಚಿನ CO2ವನ್ನು ಹೀರಿಕೊಳ್ಳಲು ಅಸಮರ್ಥವಾಗುತ್ತಾ ಹೋಗುತ್ತವೆ.. ಜಾಗತಿಕ ತಾಪಮಾನ ಏರಿಕೆಯಿಂದ ಸಾಗರಗಳ ಮೇಲೆ ಹಲವಾರು ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಉಂಟಾಗುತ್ತಿರುವ ಪರಿಣಾಮಗಳೆಂದರೆ, ಉಷ್ಣತೆಯ ಹಿಗ್ಗುವಿಕೆ, ಗ್ಲೇಶಿಯರ್‌ಗಳು ಮತ್ತು ಮಂಜುಗಡ್ಡೆ ಹಾಳೆಗಳ ಕರಗುವಿಕೆ ಹಾಗೂ ಸಮುದ್ರ ಮೇಲ್ಮೈ ಉಷ್ಣತಾ ಏರಿಕೆ - ಇವುಗಳಿಂದ ಹೆಚ್ಚುತ್ತಿರುವ ಉಷ್ಣತಾ ಪದರುಗಳು. ಇನ್ನಿತರ ಸಾಧ್ಯವಿರುವ ಪರಿಣಾಮಗಳೆಂದರೆ ಸಾಗರ ಪರಿಚಲನೆಯಲ್ಲಿ ದೊಡ್ಡಮಟ್ಟದ ಬದಲಾವಣೆಗಳು. ==== ಸಮುದ್ರಮಟ್ಟ ಏರಿಕೆ ==== ಸರಾಸರಿ ಜಾಗತಿಕ ತಾಪಮಾನ ಏರಿಕೆಯೊಂದಿಗೇ ಸಾಗರಗಳ ನೀರಿನ ಪರಿಮಾಣ ಹೆಚ್ಚಾಗುತ್ತದೆ, ಮತ್ತು ಹಿಂದೆ ಭೂಮಿಯ ಮೇಲೆ ಗ್ಲೇಷಿಯರ್‌ಗಳ ರೂಪದಲ್ಲಿ ಸಂಗ್ರಹವಾಗಿದ್ದ ನೀರೂ ಅವುಗಳಿಗೆ ಸೇರಿಕೊಳ್ಳುತ್ತದೆ. ಉದಾ.ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್‌ಟಿಕ್ ಹಿಮದ ಹಾಳೆಗಳು. ಪ್ರಪಂಚದಾದ್ಯಂತ ಹರಡಿರುವ ಹೆಚ್ಚಿನ ಗ್ಲೇಶಿಯರ್‌ಗಳ ಪರಿಮಾಣದಲ್ಲಿ 2050ರವರೆಗೆ 60%ನಷ್ಟು ನಷ್ಟವುಂಟಾಗುವುದೆಂದು ಅಂದಾಜು ಮಾಡಲಾಗಿದೆ. 1993ರಿಂದ, /Poseidonನಿಂದ ಕಳುಹಿಸಲಾದ ಉಪಗ್ರಹದ ಔನ್ನತ್ಯಮಾಪನವು ಇದು ವರ್ಷದಂತೆ ಆಗುತ್ತಿರುವುದನ್ನು ಸೂಚಿಸುತ್ತದೆ ಸಮುದ್ರಮಟ್ಟವು ಈಗ ಗಿಂತ ಹೆಚ್ಚು ಎಂದರೆ 20,000 ವರ್ಷಗಳ ಹಿಂದೆ ಇದ್ದಂತಹ]ಗಿಂತ ಹೆಚ್ಚಿನ ಏರಿಕೆಯನ್ನು ತೋರಿಸುತ್ತಿದೆ. ಈ ರೀತಿಯ ಭಾರೀ ಏರಿಕೆ ಸುಮಾರು 7000 ವರ್ಷಗಳ ಹಿಂದೆ ಕಂಡುಬಂದಿತ್ತುನ ನಂತರ ಜಾಗತಿಕ ತಾಪಮಾನವು ಕಡಿಮೆಯಾಗಿ ಈಗಿನ ಮುಂಚೆ 4000 ಮತ್ತು 2500 ವರ್ಷಗಳ ನಡುವೆ ಸಮುದ್ರಮಟ್ಟದಲ್ಲಿ ನಷ್ಟು ತಗ್ಗುವಿಕೆಯನ್ನುಂಟುಮಾಡಿತು3000 ವರ್ಷಗಳ ಹಿಂದಿನಿಂದ 1ನೇ ಶತಮಾನದ ಆರಂಭದವರೆಗೆ ಸಮುದ್ರಮಟ್ಟವು ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಏರಿಳಿತಗಳನ್ನು ಬಿಟ್ಟರೆ ಹೆಚ್ಚೂಕಡಿಮೆ ಒಂದೇ ಮಟ್ಟದಲ್ಲಿದ್ದಿತು. ಅದರೆ, ನಿಂದ ಸಮುದ್ರಮಟ್ಟದಲ್ಲಿ ಕೆಲಪ್ರಮಾಣದ ಏರಿಕೆಯುಂಟಾಗಿರಬಹುದು; ಏಕೆಂದರೆ ಪೆಸಿಫಿಕ್ ಸಾಗರದಲ್ಲಿ ದೊರೆತಿರುವ ಸಾಕ್ಷ್ಯಾಧಾರಗಳು 700 BPಯ ಹೊತ್ತಿಗೆ ಈಗಿನ ಮಟ್ಟಕ್ಕಿಂತ ಬಹುಶ ಏರಿಕೆಯುಂಟಾಗಿರುವುದನ್ನು ತೋರಿಸುತ್ತವೆ 2007ರಲ್ಲಿ ಪ್ರಕಟಿತವಾದ ಲೇಖನವೊಂದರಲ್ಲಿ, ಕ್ಲೈಮ್ಯಾಟಾಲಜಿಸ್ಟ್ ಆಗಿರುವ ಜೇಮ್ಸ್ ಹ್ಯಾನ್‌ಸೆನ್ . ಧ್ರುವಪ್ರದೇಶಗಳ ಹಿಮವು ಕ್ರಮೇಣವಾಗಿ ಮತ್ತು ಒಂದೇ ದಿಕ್ಕಿನಲ್ಲಿ ಕರಗುವುದಿಲ್ಲವೆಂದೂ,ಇನ್ನೊಂದು ಭೂವೈಜ್ಞಾನಿಕ ದಾಖಲೆಯ ಪ್ರಕಾರ ಹಿಮದ ಹಾಳೆಗಳು ಒಂದು ಮಿತಿಯನ್ನು ದಾಟಿದಲ್ಲಿ ಇದಕ್ಕಿದ್ದಂತೆ ಅಸ್ಥಿರವಾಗುವುದು ಕಂಡುಬರುತ್ತದೆ. ಈ ಲೇಖನದಲ್ಲಿ ಹ್ಯಾನ್‌ಸೆನ್ . ಈ ರೀತಿ ಬರೆಯುತ್ತಾರೆ: ಪರಿಸ್ಥಿತಿಗಳು ಈ ಶತಮಾನದ ವೇಳೆಯಲ್ಲಿ ದೊಡ್ಡಪ್ರಮಾಣದ ಸಮುದ್ರಮಟ್ಟ ಏರಿಕೆಯನ್ನುಂಟುಮಾಡಬಹುದೆಂಬ ನಮ್ಮ ಕಾಳಜಿ ( 2005) ಮತ್ತು ಇಪ್ಪತ್ತೊಂದನೇ ಶತಮಾನದ ಸಮುದ್ರಮಟ್ಟದ ಏರಿಕೆಗೆ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್‌ಟಿಕಾಗಳ ಕೊಡುಗೆ ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸುವ (2001, 2007)ನ ಯೋಚನೆಗಳು ಬಹಳ ಭಿನ್ನವಾಗಿವೆ. ಆದರೆ IPCCಯ ವಿಶ್ಲೇಷಣೆ ಮತ್ತು ಪ್ರಕ್ಷೇಪಣಗಳು ಒದ್ದೆ ಹಿಮದ ಹಾಳೆಗಳ ನಶಿಸುವಿಕೆಯ ನಾನ್‌ಲೀನಿಯರ್ ಭೌತಶಾಸ್ತ್ರವನ್ನಾಗಲೀ, ಹಿಮದ ತೊರೆಗಳ ಮತ್ತು ಹಿಮದ ಬದುಗಳ ಕೊರಕಲುಗಳನ್ನಾಗಲೀ ಪರಿಗಣನೆಗೆ ತೆಗೆದುಕೊಂಡಿಲ್ಲ, ಇದಲ್ಲದೆ ಹಿಮದ ಹಾಳೆಗಳ ತೂರಿಕೆ ಮತ್ತು ಸಮುದ್ರಮಟ್ಟದ ಏರಿಕೆಗಳ ನಡುವಿನ ಗಮನಾರ್ಹ ಹಿನ್ನಡೆಯ ಗೈರುಹಾಜರಾತಿಗೆ ಕಾರಣವಾಗಿ ನಾವು ಮಂಡಿಸಿರುವ ಪ್ರಾಚೀನಹವಾಗುಣ ಸಾಕ್ಷಿಗಳ ಜತೆಗೂ ಅವರು ಸುಸಂಬದ್ಧರಾಗಿಲ್ಲ ಒಂದು ಹಿಮದ ಹಾಳೆಯ ಕುಸಿಯುವಿಕೆಯಿಂದ ಉಂಟಾಗುವ ಸಮುದ್ರಮಟ್ಟದ ಏರಿಕೆಯು ಜಾಗತಿಕವಾಗಿ ಅಸಮಾನವಾಗಿ ಹಂಚಿಕೆಯಾಗುವುದು. ಹಿಮದ ಹಾಳೆಯ ಸುತ್ತ ಉಂಟಾಗುವ ಭೂರಾಶಿಯ ನಷ್ಟದಿಂದಾಗಿ ಅಲ್ಲಿನಗುರುತ್ವಾಕರ್ಷಣ ಸಾಮರ್ಥ್ಯ]]ವು ಕಡಿಮೆಯಾಗಿ, ಸ್ಥಳೀಯ ಸಮುದ್ರ ಮಟ್ಟದ ಏರಿಕೆಯನ್ನು ತಡೆಯುವುದು ಅಥವಾ ಸಮುದ್ರಮಟ್ಟದ ಕುಸಿತವನ್ನೂ ಕೂಡ ಉಂಟುಮಾಡುವುದು. ಸ್ಥಳೀಯ ಭೂರಾಶಿಯ ನಷ್ಟದಿಂದಾಗಿ ಭೂಮಿಯ ಮೊಮೆಂಟ್ ಆಫ್ ಇನರ್ಶಿಯಾ(ನಿಶ್ಚಲತೆಯ ಘಳಿಗೆ) ಕೂಡಾ ಬದಲಾಗುತ್ತದೆ, ಏಕೆಂದರೆ ಭೂಮಿಯ ಆವರಣದ ಹರಿವು ಈ ಭೂರಾಶಿಯ ನಷ್ಟವನ್ನು ಭರಿಸಲು 10–15 ಸಾವಿರ ವರ್ಷಗಳಾದರೂ ಬೇಕು. ಈ ಮೊಮೆಂಟ್ ಆಫ್ ಇನರ್ಶಿಯಾದ ಬದಲಾವಣೆಯು ಟ್ರೂ ಪೊಲಾರ್ ವಾಂಡರ್ಗೆ ಕಾರಣವಾಗುತ್ತದೆ, ಇದರಲ್ಲಿ ಭೂಮಿಯ ಆವರ್ತನೆಯ ಅಕ್ಷರೇಖೆಯು ಸೂರ್ಯನಿಗೆ ತಕ್ಕಂತೆ ಸ್ಥಿರವಾಗಿದ್ದರೂ ಭೂಮಿಯ ಕಠಿಣವಾದ ಗೋಲವು ಅದಕ್ಕೆ ತಕ್ಕಂತೆ ತಿರುಗುತ್ತಿರುತ್ತದೆ. ಇದರಿಂದ ಭೂಮಿಯ ಸಮಭಾಜಕವೃತ್ತದ ಉಬ್ಬುವಿಕೆಯ ಸ್ಥಾನವು ಬದಲಾಗಿ ಇದು ಮತ್ತೆ ಜಿಯಾಯ್ಡ್ ಅಥವಾ ಸಂಭವನೀಯ ಜಾಗತಿಕ ವಿಸ್ತಾರದ ಮೇಲೆ ಪ್ರಭಾವ ಬೀರುತ್ತದೆ. 2009ರಲ್ಲಿ ನಡೆಸಲಾದ ಪಶ್ಚಿಮ ಅಂಟಾರ್ಕ್‌ಟಿಕ್ ಹಿಮದ ಹಾಳೆಯ ಕುಸಿತದ ಪರಿಣಾಮಗಳನ್ನು ಕುರಿತ ಅಧ್ಯಯನವು ಈ ಎರಡೂ ಪರಿಣಾಮಗಳ ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ಜಾಗತಿಕವಾಗಿ ಉಂಟಾಗಬೇಕಾಗಿದ್ದ 5 ಮೀಟರ್‌ಗಳಷ್ಟು ಸಮುದ್ರಮಟ್ಟದ ಏರಿಕೆಯ ಬದಲಾಗಿ ಪಶ್ಚಿಮ ಅಂಟಾರ್ಕ್‌ಟಿಕಾದಲ್ಲಿ ಸುಮಾರು 25 ಸೆಂಟೀಮೀಟರ್‌ಗಳಷ್ಟು ಸಮುದ್ರಮಟ್ಟದ ಕುಸಿತವುಂಟಾಯಿತು ಹಾಗೂ ಯುನೈಟೆಡ್ ಸ್ಟೇಟ್ಸ್, ಕೆನಡಾದ ಕೆಲವು ಭಾಗಗಳು, ಹಾಗೂ ಹಿಂದೂ ಮಹಾಸಾಗರದಲ್ಲಿ 6.5 ಮೀಟರ್‌ಗಳಷ್ಟು ಸಮುದ್ರಮಟ್ಟದ ಏರಿಕೆ ಕಂಡುಬಂದಿತು 1961 ರಿಂದ 2003ರವರೆಗೆ ಜಾಗತಿಕ ಸಾಗರ ತಾಪಮಾನವು ಮೇಲ್ಮೈಯಲ್ಲಿ 0.10 ° ಇದ್ದುದು ಈಗ ಅಷ್ಟು ಉಷ್ಣತೆ 700 ಮೀ. ಆಳದಲ್ಲಿ ಕಂಡುಬರುತ್ತಿದೆ. ಒಂದು ವರ್ಷದಿಂದ ಇನ್ನೊಂದಕ್ಕೆ ಮತ್ತು ದೀರ್ಘಕಾಲಿಕ ಸಮಯದ ಶ್ರೇಣಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಜಾಗತಿಕ ಸಾಗರ ಉಷ್ಣತಾಂಶಗಳನ್ನು ಗಮನಿಸಿದಾಗ ಅದು 1991ರಿಂದ 2003ರವರೆಗೆ ಹೆಚ್ಚಿನ ಉಷ್ಣತಾ ಏರಿಕೆಯನ್ನು ತೋರಿಸಿದರೆ, 2003ರಿಂದ 2007ರವರೆಗೆ ಸ್ವಲ್ಪ ಶೈತ್ಯವನ್ನು ಕೂಡ ತೋರುತ್ತದೆ.ಅಂಟಾರ್ಕ್‌‍ಟಿಕ್‌ನ ದಕ್ಷಿಣ ಸಾಗರದ ಉಷ್ಣತೆಯು 1950ರ ಮತ್ತು 1980ರ ದಶಕಗಳ ನಡುವೆ 0.17 ° (0.31 °)ನಷ್ಟು ಜಾಸ್ತಿಯಾಗಿದ್ದು, ಇದು ಪ್ರಪಂಚದ ಸಾಗರಗಳೆಲ್ಲದರ ಉಷ್ಣತೆಯ ಎರಡರಷ್ಟು.ಜೀವ ವ್ಯವಸ್ಥೆಗಳ ಮೇಲೆ ಪರಿಣಾಮವನ್ನುಂಟುಮಾಡುವುದು ಮಾತ್ರವಲ್ಲ, (ಉದಾ. ಕರಗುವ ಸಮುದ್ರದ ಮಂಜುಗಡ್ಡೆಯು ಅದರ ಒಳಭಾಗದಲ್ಲಿ ಬೆಳೆಯುವ ಅಲ್ಜೀಗಳ ಮೇಲೆ ದುಷ್ಪಣಾಮವುಂಟುಮಾಡುವುದು), ತಾಪಮಾನ ಏರಿಕೆಯು CO2ವನ್ನು ಹೀರಿಕೊಳ್ಳುವ ಸಾಗರದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ==== ಆಮ್ಲತೆಯ ಹೆಚ್ಚಳ ==== ಸಾಗರದ ಆಮ್ಲೀಕರಣವು ವಾತಾವರಣದಲ್ಲಿ CO2ನ ಸಾಂದ್ರತೆಯ ಏರಿಕೆಯಿಂದ ಉಂಟಾಗುತ್ತದೆ, ಮತ್ತು ಇದು ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮ ಅಲ್ಲ. ಜೀವಿಗಳು ಉತ್ಪಾದಿಸುವ ಹೆಚ್ಚಿನ CO2ವನ್ನು ಸಾಗರಗಳು ಕರಗಿದ ಅನಿಲದ ರೂಪದಲ್ಲಿ ಇಲ್ಲವೇ ಸತ್ತಮೇಲೆ ಅಸ್ಥಿಪಂಜರಗಳ ರೂಪದಲ್ಲಿ ಸಾಗರದ ತಳಸೇರಿ ಸುಣ್ಣ ಅಥವಾ ಸುಣ್ಣದಕಲ್ಲುಗಳಾಗಿ ಮಾರ್ಪಾಡು ಹೊಂದುವ ಸಣ್ಣಪುಟ್ಟ ಸಾಗರಜೀವಿಗಳ ರೂಪದಲ್ಲಿ ಹೀರಿಕೊಳ್ಳುತ್ತವೆ. ಸಾಗರಗಳು ಸದ್ಯಕ್ಕೆ ವಾರ್ಷಿಕವಾಗಿ ತಲಾ ಒಂದು ಟನ್ನಿನಷ್ಟು CO2 ಅನ್ನು ಹೀರಿಕೊಳ್ಳುತ್ತವೆ. ಒಂದು ಅಂದಾಜಿನ ಪ್ರಕಾರ ಸಾಗರಗಳು ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾದ ಸುಮಾರು ಅರ್ಧಭಾಗದಷ್ಟು CO2 ಅಷ್ಟನ್ನೂ ಸುಮಾರು 1800ರಿಂದ ಹೀರಿಕೊಂಡಿವೆ ಎಂದು ಎಣಿಕೆ ಹಾಕಲಾಗಿದೆ(1800ರಿಂದ 1994ರವರೆಗ 118 ± 19 ಪೆಟಾಗ್ರಾಮ್ಸ್‌ನಷ್ಟು ಇಂಗಾಲ) ನೀರಿನಲ್ಲಿ CO2 ಒಂದು ದುರ್ಬಲವಾದ ಇಂಗಾಲಾಮ್ಲವಾಗಿ ಪರಿವರ್ತಿತವಾಗುತ್ತದೆ, ಮತ್ತು ಔದ್ಯಮಿಕ ಕ್ರಾಂತಿಯ ನಂತರ ಹಸಿರುಮನೆ ಅನಿಲಗಳಲ್ಲಿ ಉಂತಾಗಿರುವ ಹೆಚ್ಚಳವು ಸಮುದ್ರಜಲದ ಸರಾಸರಿ (ಆಮ್ಲೀಯತೆಯ ಪ್ರಯೋಗಾಲಯ ಮಾನಕ) ಅನ್ನು 0.1 ಯುನಿಟ್‌ಗಳಿಂದ 8.2 ಗೆ ಹೆಚ್ಚಿಸಿದೆ. ಸೂಚಿಸಲಾಗಿರುವ ಹೊರಸೂಸುವಿಕೆಗಳು ಅನ್ನು 2100ರ ಹೊತ್ತಿಗೆ ಇನ್ನೂ 0.5ರಷ್ಟು ಕಡಿಮೆ ಮಾಡಬಹುದು ಮತ್ತು ಅಲ್ಲಿಂದೀಚೆಗೆ ನೂರಾರು ಸಹಸ್ರಮಾನಗಳಲ್ಲಿಯೂ ಕಂಡಿಲ್ಲದ ಮಟ್ಟಕ್ಕೆ, ಈ ಅವಧಿಯಲ್ಲಿ ಎಂದೂ ಕಂಡು-ಕೇಳಿರದಷ್ಟು ವೇಗದಲ್ಲಿ - ಬಹುಶಃ 100 ಪಟ್ಟಿನಷ್ಟು ಕಡಿಮೆ ಮಾಡಬಹುದು. ಹೆಚ್ಚುತ್ತಿರುವ ಆಮ್ಲೀಯತೆಯು ಹವಳಗಳ (ಪ್ರಪಂಚದ ಶೇಕಡಾ 16ರಷ್ಟು ಹವಳದ ದಿಬ್ಬಗಳು 1998ರಲ್ಲಿ ಬಿಸಿಯಾದ ನೀರಿನಿಂದ ಉಂಟಾದ ಬ್ಲೀಚಿಂಗ್‌ನಿಂದಾಗಿ ಸಾವನ್ನಪ್ಪಿದವು ಈ ವರ್ಷವು ದಾಖಲಾದ ಅತಿ ಬಿಸಿಯಾದ ವರ್ಷವಾಗಿದೆ) ಮತ್ತು ಕ್ಯಾಲ್ಷಿಯಂ ಕಾರ್ಬೋನೇಟ್ನ ಚಿಪ್ಪುಗಳನ್ನುಳ್ಳ ಇತರ ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದೆಂಬ ಕಾಳಜಿಯನ್ನು ವ್ಯಕ್ತಪಡಿಸಲಾಗಿದೆ ನವೆಂಬರ್ 2009ರ ನಲ್ಲಿ ಪ್ರಕಟವಾದ ಕೆನಡಾದ Oceansನ ವಿಜ್ಞಾನಿಗಳು ಬರೆದ ಒಂದು ಲೇಖನದಲ್ಲಿ ಅವರು ಬ್ಯೂಫೋರ್ಟ್ ಸಮುದ್ರದ ಪ್ಲ್ಯಾಂಕ್‌ಟನ್ ಚಿಪ್ಪುಗಳನ್ನು ಕಟ್ಟುವ ಕ್ಯಾಲ್ಷಿಯಂ ಕ್ಲೋರೈಡ್‌ನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿರುವುದನ್ನು ಕಂಡಿರುವುದು ವರದಿಯಾಗಿತ್ತು. ಲಾಡ್ಜ್‌ಪೋಲ್ ಪೈನ್ ಮರಗಳನ್ನು (ನವೆಂಬರ್ 2008ರಂತೆ) ಕೊಂದಿದ್ದು ಇದು ಹಿಂದೆ ದಾಖಲಾದ ಯಾವುದೇ ಕೀಟದ ಪಿಡುಗಿಗಿಂತ ಗಣನೀಯವಾಗಿ ಬೃಹತ್ ಗಾತ್ರದ್ದಾಗಿದೆಹಾಗೂ ಭೂಖಂಡದ ವಿಭಜನೆಯ ಜಾಗದಲ್ಲಿ 2007ರಲ್ಲಿ ಬೀಸುತ್ತಿದ್ದ ಬಹಳ ವೇಗವಾದ ಗಾಳಿಯನ್ನೂ ದಾಟಿ ಅಲ್ಬರ್ಟಾಗೆ ಬಂದು ತಲುಪಿತು. ಇದೇ ರೀತಿಯ ಇನ್ನೊಂದು ಪಿಡುಗು, ಸ್ವಲ್ಪ ಸಣ್ಣ ಗಾತ್ರದಲ್ಲಿ 1999ರ ಹೊತ್ತಿಗೆ ಕೊಲೊರಾಡೋ, ವ್ಯೋಮಿಂಗ್, ಮತ್ತು ಮೊಂಟಾನಾಗಳಲ್ಲಿ ಆರಂಭವಾಯಿತು. ಯುನೈಟೆಡ್ ಸ್ಟೇಟ್ಸ್‌ನ ಅರಣ್ಯ ಇಲಾಖೆಯವರ ಪ್ರಕಾರ 2011 ಮತ್ತು 2013ರ ನಡುವೆ ಕೊಲೊರಾಡೋನ ಐದು ಇಂಚುಗಳಿಗಿಂತ ಹೆಚ್ಚು ಸುತ್ತಳತೆಯ ಸುಮಾರು ಎಲ್ಲಾ 5 (20,000 km2) ಲಾಡ್ಜ್‌ಪೋಲ್ ಪೈನ್ ಮರಗಳು ನಷ್ಟವಾಗುತ್ತವೆ ಉತ್ತರದ ಅರಣ್ಯಗಳು ಇಂಗಾಲದ ತೊಟ್ಟಿಗಳಾಗಿರುವುದರಿಂದ, ಸತ್ತ ಅರಣ್ಯಗಳು ಇಂಗಾಲದ ಪ್ರಮುಖ ಮೂಲವಾಗಿದ್ದು ಇಂತಹ ಬೃಹತ್ ವಿಸ್ತಾರದ ಅರಣ್ಯಗಳ ನಷ್ಟದಿಂದಾಗಿ ಜಾಗತಿಕ ತಾಪಮಾನ ಏರಿಕೆಯ ಮೇಲೆ ಧನಾತ್ಮಕ ಪ್ರಭಾವವುಂಟಾಗುತ್ತದೆ. ನಿಕೃಷ್ಟ ವರುಷಗಳ ಅವಧಿಯಲ್ಲಿ ಬೀಟ್‌ಲ್ ಪಿಡುಗಿನಿಂದುಂಟಾಗುವ ಇಂಗಾಲದ ಹೊರಸೂಸುವಿಕೆಯು ಇಡೀ ಕೆನಡಾದ ವಾರ್ಷಿಕ ಸರಾಸರಿ ಕಾಳ್ಗಿಚ್ಚುಗಳ ಇಂಗಾಲ ಹೊರಸೂಸುವಿಕೆ ಅಥವಾ ಆ ದೇಶದ ಐದು ವರುಷಗಳ ಸಾರಿಗೆ ಚಲನೆಯಿಂದುಂಟಾಗುವ ಇಂಗಾಲ ಹೊರಸೂಸುವಿಕೆಗೆ ಸಮಾನವಾಗಿವೆ ಕೂಡಲೇ ಉಂಟಾಗುವ ಜೀವವ್ಯವಸ್ಥೆಯ ಮತ್ತು ಆರ್ಥಿಕವ್ಯವಸ್ಥೆಗಳ ಮೇಲಿನ ಪರಿಣಾಮಗಳನ್ನು ಬಿಟ್ಟರೆ, ಈ ಸತ್ತ ಬೃಹತ್ ಅರಣ್ಯಗಳಿಗೆ ಕಾಳ್ಗಿಚ್ಚಿನ ಅಪಾಯವಿದೆ. ಬೆಚ್ಚಗಾಗುತ್ತಿರುವ ಹವಾಗುಣದಿಂದಾಗಿ ಹಲವಾರು ಆರೋಗ್ಯಪೂರ್ಣ ಅರಣ್ಯಗಳಿಗೂ ಕಾಳ್ಗಿಚ್ಚುಗಳ ಅಪಾಯ ಬಂದೊದಗಿದೆ. ಉತ್ತರ ಅಮೆರಿಕಾದ ಬೋರಿಯಲ್ ಅರಣ್ಯಗಳ ಹತ್ತು ವರ್ಷಗಳ ಕಾಳ್ಗಿಚ್ಚಿನ ಸರಾಸರಿಯು ಹಲವಾರು ದಶಕಗಳವರೆಗೆ 10,000 km²(2.5 ಮಿಲಿಯನ್ ಎಕರೆಗಳು)ನಷ್ಟಿದ್ದುದು 1970ರಿಂದೀಚೆಗೆ ವಾರ್ಷಿಕವಾಗಿ 28,000 km²(7 ಮಿಲಿಯನ್ ಎಕರೆಗಳು)ನಷ್ಟಾಗಿದೆ ಈ ಬದಲಾವಣೆಯು ಅರಣ್ಯ ನಿರ್ವಹಣಾ ಪದ್ಧತಿಗಳಲ್ಲಿ ಆಗಿರಬಹುದಾದ ಬದಲಾವಣೆಗಳಿಂದ ಆಗಿರಬಹುದಾದರೂ, ಪಶ್ಚಿಮ ಯು.ಎಸ್ ನಲ್ಲಿ 1986ರಿಂದೀಚಿನ ಸಮಯದಲ್ಲಿ 1970ರಿಂದ 1986ರವರೆಗಿನ ಅವಧಿಯನ್ನು ಪರಿಗಣಿಸುವುದಾದಲ್ಲಿ ಬಿಸಿಯಾದ ಬೇಸಿಗೆಗಳಿಂದಾಗಿ ದೊಡ್ಡ ಕಾಳ್ಗಿಚ್ಚುಗಳು ನಾಲ್ಕುಪಟ್ಟು ಮತ್ತು ಸುಟ್ಟುಹೋದ ಅರಣ್ಯದ ವಿಸ್ತೀರ್ಣವು ಆರುಪಟ್ಟು ಹೆಚ್ಚಾಗಿದೆ. ಇದೇ ರೀತಿಯ ಕಾಳ್ಗಿಚ್ಚು ಚಟುವಟಿಕೆಗಳು ಕೆನಡಾದಲ್ಲಿ 1920ರಿಂದ 1999ರವರೆಗೆ ವರದಿಯಾಗಿವೆ1997ರಿಂದೀಚೆಗೆ ಇಂಡೋನೇಶಿಯಾದ ಕಾಳ್ಗಿಚ್ಚುಗಳೂ ಕೂಡ ನಾಟಕೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅರಣ್ಯಗಳಲ್ಲಿರುವ ಕೃಷಿಯ ಭಾಗವನ್ನು ಅಚ್ಚುಕಟ್ಟು ಮಾಡುವ ಸಲುವಾಗಿ ಹಲವಾರು ಬಾರಿ ಈ ಬೆಂಕಿಗಳನ್ನು ಹಚ್ಚಲಾಗುತ್ತದೆ. ಇದರಿಂದಾಗಿ ಈ ಪ್ರಾಂತ್ಯದ ದೊಡ್ಡ ಪೀಟ್ ಜೌಗುಪ್ರದೇಶಗಳಿಗೆ ಬೆಂಕಿ ಹತ್ತಿಕೊಂಡು ಈ ಪೀಟ್ ಜೌಗುಗಳ ಎಂಕಿಯಿಂದ ಹೊರಸೂಸುವ CO₂ನ ಪ್ರಮಾಣವು ಫಾಸಿಲ್ ಫ್ಯುಯೆಲ್ ಕಂಬಶ್ಚನ್‌ನಿಂದ ಹುಟ್ಟಿಕೊಳ್ಳುವ CO₂ನ ಶೇಕಡಾ 15ರಷ್ಟಿದೆ.< ==== ಪರ್ವತಗಳು ==== ಪರ್ವತಗಳು ಭೂಮಿಯ ಒಟ್ಟು ಮೇಲ್ಮೈನ ಸುಮಾರು ಶೇಕಡಾ 25 ಭಾಗದಷ್ಟಿದ್ದು ಜಾಗತಿಕ ಜನಸಂಖ್ಯೆಯ ಹತ್ತನೇ ಒಂದು ಭಾಗಕ್ಕೆ ಆಶ್ರಯ ನೀಡಿವೆ. ಜಾಗತಿಕ ಹವಾಗುಣದಲ್ಲಿನ ಬದಲಾವಣೆಗಳು ಪರ್ವತಗಳಲ್ಲಿ ವಾಸಿಸುವವರಿಗೆ ಹಲವಾರು ಅಪಾಯಗಳನ್ನೊಡ್ಡುವ ಸಾಧ್ಯತೆಗಳಿವೆ ಸಂಶೋಧಕರು ಕಾಲಾನುಕ್ರಮದಲ್ಲಿ ಹವಾಗುಣ ಬದಲಾವಣೆಯು ಪರ್ವತ ಹಾಗೂ ತಗ್ಗುಪ್ರದೇಶಗಳ ಜೀವವ್ಯವಸ್ಥೆಗಳ ಮೇಲೆ, ಕಾಳ್ಗಿಚ್ಚುಗಳ ತೀವ್ರತೆ ಮತ್ತು ಮರುಕಳಿಸುವಿಕೆಯಲ್ಲಿ, ಅರಣ್ಯದ ಜೀವವ್ಯವಸ್ಥೆಯ ವೈವಿಧ್ಯತೆಯ ಮೇಲೆ ಹಾಗೂ ನೀರಿನ ವಿತರಣೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸುತ್ತಿದ್ದಾರೆ.ಅಧ್ಯಯನಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹವಾಗುಣವು ಇನ್ನೂ ಬೆಚ್ಚಗಾದರೆ ಕಡಿಮೆ ಎತ್ತರದಲ್ಲಿರುವ ಪರಿಸರಗಳು ಎತ್ತರದ ಆಲ್‌ಪೈನ್ ವಲಯದವರೆಗೂ ಹರಡುವ ಸಾಧ್ಯತೆಗಳಿವೆ ಜೊಯೆಲ್ ಬಿ. ಸ್ಮಿಥ್ ಮತ್ತು ಡೆನಿಸ್ ಟಿರ್ಪಾಕ್ - ಡಿಸೆಂಬರ್ 1989</> ಈ ರೀತಿಯ ಸ್ಥಳಾಂತರದಿಂದಾಗಿ ಅಪರೂಪದ ಆಲ್‌ಪೈನ್ ಹುಲ್ಲುಗಾವಲುಗಳು ಮತ್ತು ಇತರ ಎತ್ತರಪ್ರದೇಶದ ನೆಲೆಗಳ ಮೇಲೆ ಇವು ಅತಿಕ್ರಮಣ ಮಾಡುತ್ತವೆ. ಹೆಚ್ಚು ಎತ್ತರಪ್ರದೇಶಗಳಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಸ್ಥಳೀಯ ಹವಾಗುಣದ ದೀರ್ಘಕಾಲೀನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಪರ್ವತಗಳಲ್ಲಿ ಮತ್ತೂ ಎತ್ತರಕ್ಕೆ ಹೋಗುವುದರಿಂದ ಹೊಸ ನೆಲೆಗಳಿಗೆ ಬಹಳ ಕಡಿಮೆ ಸ್ಥಳ ದೊರಕುವುದು. ಹವಾಗುಣದ ಬದಲಾವಣೆಗಳು ಪರ್ವತ ಹಿಮಾಚ್ಛಾದನೆ ಮತ್ತು ಗ್ಲೇಶಿಯರ್‌ಗಳ ಆಳದ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ಋತುಮಾನ ಕರಗುವಿಕೆಯಲ್ಲಿ ಯಾವುದೇ ಮಟ್ಟದ ಬದಲಾವಣೆಗಳು ಪರ್ವತಗಳ ಕರಗಿದ ತಾಜಾನೀರಿನ ಹರಿವಿನ ಮೇಲೆ ಅವಲಂಬಿತವಾಗಿರುವ ಪ್ರದೇಶಗಳಮೇಲೆ ಬಲವಾದ ಪ್ರಭಾವ ಬೀರಬಹುದು. ಹೆಚ್ಚುವ ಉಷ್ಣತೆಯಿಂದಾಗಿ ಹಿಮವು ವಸಂತಕಾಲದಲ್ಲಿ ಬೇಗನೆ ಮತ್ತು ಹೆಚ್ಚು ವೇಗವಾಗಿ ಕರಗುವುದರಿಂದ ಹರಿವಿನ ಸಮಯ ಮತ್ತು ವಿತರಣೆಯಲ್ಲಿ ವ್ಯತ್ಯಾಸಗಳುಂಟಾಗಬಹುದು. ಈ ಬದಲಾವಣೆಗಳು ನೈಸರ್ಗಿಕ ವ್ಯವಸ್ಥೆಗಳು ಹಾಗೂ ಮಾನವ ಉಪಯೋಗಕ್ಕೆ ಬರುವಂತಹ ತಾಜಾನೀರಿನ ಲಭ್ಯತೆಯ ಮೇಲೆ ಪ್ರಭಾವ ಬೀರಬಹುದು ==== ಜೀವವ್ಯವಸ್ಥೆಗಳ ಉತ್ಪಾದಕತೆ ==== ಸ್ಮಿತ್ ಮತ್ತು ಹಿಟ್ಜ್ 2003ರಲ್ಲಿ ಮಂಡಿಸಿದ ಲೇಖನವೊಂದರ ಪ್ರಕಾರ ಸರಾಸರಿ ಜಾಗತಿಕ ತಾಪಮಾನದ ಏರಿಕೆ ಹಾಗೂ ಜೀವವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯಗಳ ನಡುವಿನ ಸಂಬಂಧವು ಲಾಕ್ಷಣಿಕವಾದ್ದೆಂದು ತಾರ್ಕಿಕವಾಗಿ ಊಹಿಸಬಹುದು. ಇಂಗಾಲದ ಡೈಯಾಕ್ಸೈಡ್‌ನ ಹೆಚ್ಚುವ ಸಾಂದ್ರತೆಯು ಗಿಡಮರಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗುವುದು ಮಾತ್ರವಲ್ಲದೆ ಹೆಚ್ಚು ನೀರನ್ನು ಬೇಡುತ್ತದೆ. ಹೆಚ್ಚಿನ ತಾಪಮಾನಗಳು ಮೊದಮೊದಲಿನಲ್ಲಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗಿ ಕಾಣಬಹುದು. ಕ್ರಮೇಣವಾಗಿ ಉಚ್ಛ್ರಾಯವನ್ನು ತಲುಪಿದ ಈ ಬೆಳವಣಿಗೆಯು ಕ್ಷೀಣಿಸಲು ಆರಂಭಿಸುವುದು. ಏಪ್ರಿಲ್ 2008ರಲ್ಲಿ ನೀಡಿದ ಅದರ ವರದಿಯಲ್ಲಿ ಉಷ್ಣತೆಯಲ್ಲಿನ ಏರಿಕೆಯ ಕಾರಣದಿಂದಾಗಿ ಪಪುವಾ ನ್ಯೂಗಿನಿಯ ಹೈಲ್ಯಾಂಡ್ ಪ್ರದೇಶದಲ್ಲಿ ಮಲೇರಿಯಾ ಜ್ವರಗಳ ಸಂಖ್ಯೆ ಹೆಚ್ಚಾಗಲಿದೆಯೆಂದು ತಿಳಿಸಲಾಯಿತು. ==== ಮಕ್ಕಳು ==== 2007ರಲ್ಲಿ, ಜಾಗತಿಕ ಹವಾಮಾನ ಬದಲಾವಣೆ ಮತ್ತು ಮಕ್ಕಳ ಆರೋಗ್ಯ ದ ಬಗೆಗಿನ ನೀತಿಯ ವರದಿಯಲ್ಲಿ ಈ ರೀತಿಯಾಗಿ ಹೇಳಿದರು: ಹವಾಗುಣ ಬದಲಾವಣೆಯಿಂದ ನೇರವಾಗಿ ಆರೋಗ್ಯದ ಮೇಲೆ ಉಂಟಾಗಬಹುದಾದ ಕೆಲವು ಪರಿಣಾಮಗಳೆಂದರೆ ಹವಾಮಾನ ವೈಪರೀತ್ಯದ ಘಟನೆಗಳು ನೈಸರ್ಗಿಕ ಅನಾಹುತಗಳು, ಹವಾಮಾನ-ಸೂಕ್ಶ್ಮ ಸಾಂಕ್ರಾಮಿಕರೋಗಗಳು, ಹವಾಮಾಲಿನ್ಯ-ಸಂಬಂಧೀ ಖಾಯಿಲೆಗಳು, ಹಾಗೂ ಉಷ್ಣತೆಗೆ ಸಂಬಂಧಿಸಿದ, ಹೆಚ್ಚು ಮಾರಕವಾದ ಕಾಯಿಲೆಗಳು. ಈ ಎಲ್ಲಾ ಪಂಗಡಗಳಲ್ಲಿ, ಇತರ ವರ್ಗಗಳಿಗೆ ಹೋಲಿಸಿದಾಗ ಮಕ್ಕಳಿಗೆ ಉಂಟಾಗಬಹುದಾದ ಅಪಾಯಗಳು ಹೆಚ್ಚಾಗಿವೆ 2008-04-29ರಂದು, ಒಂದು ವರದಿಯು ಕಂಡುಕೊಂಡ ಪ್ರಕಾರ ಜಾಗತಿಕ ತಾಪಮಾನ ಏರಿಕೆಯು ಈಗಾಗಲೆ ಪ್ರಪಂಚದಾದ್ಯಂತ ಹೆಚ್ಚು ಸೂಕ್ಷ್ಮವಾಗಿರುವ ಮಕ್ಕಳ ಜೀವನಮಟ್ಟವನ್ನು ಅಪಾಯಕ್ಕೊಡ್ಡಿರುವುದಷ್ಟೇ ಅಲ್ಲ, ವಿಶ್ವಸಂಸ್ಥೆಯ ಅನ್ನು ಸಾಧಿಸಲು ಕಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದೆ. ಜಾಗತಿಕ ತಾಪಮಾನ ಏರಿಕೆಯು ಶುದ್ಧ ನೀರು ಮತ್ತು ಆಹಾರ ಸಾಮಗ್ರಿಗಳು, ಅದರಲ್ಲೂ ವಿಶೇಷವಾಗಿ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ದುರ್ಲಭವಾಗುವ ಸಾಧ್ಯತೆಗಳಿವೆ. ಅನಾಹುತಗಳು, ಹಿಂಸೆ ಮತ್ತು ರೋಗಗಳು ಹೆಚ್ಚುಹೆಚ್ಚಾಗಿ ನಡೆಯುವುದರಿಂದ, ಭವಿಷ್ಯದ ಅತ್ಯಂತ ಬಡ ಮಕ್ಕಳ ಭವಿಷ್ಯವು ಬಹಳ ದುರ್ಗಮವಾಗಿದೆ. === ಭದ್ರತೆ === ಎಂಬ ನಿವೃತ್ತ ಯು.ಎಸ್.ಜನರಲ್‌ಗಳು ಹಾಗೂ ಅಡ್ಮಿರಲ್‌ಗಳ ಸಮಿತಿಯು " ." ಎಂಬ ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ವರದಿಯ ಪ್ರಕಾರ ಜಾಗತಿಕ ತಾಪಮಾನ ಏರಿಕೆಯಿಂದ ಭದ್ರತಾ ವಿವಕ್ಷೆಗಳುಂಟಾಗಬಹುದೆಂದೂ, ಈಗಾಗಲೇ ಸೂಕ್ಷ್ಮ ಪ್ರದೇಶಗಳೆನ್ನಿಸಿಕೊಂಡಲ್ಲಿ ಇದು "ಬೆದರಿಕೆಯನ್ನು ಹೆಚ್ಚುಮಾಡು"ವುದೆಂದೂ ಈ ವರದಿಯು ಎಣಿಕೆಹಾಕಿದೆ. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಮಾರ್ಗರೆಟ್ ಬೆಕೆಟ್ರವರ ವಾದದ ಪ್ರಕಾರ "ಅಸ್ಥಿರ ಹವಾಗುಣವು ಸಂಘರ್ಷವನ್ನು ಹೆಚ್ಚಿಸುವಂಥ ವಲಸೆಯ ಒತ್ತಡಗಳು ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧೆಯೇ ಮುಂತಾದವನ್ನು ಉಲ್ಬಣಗೊಳಿಸುತ್ತದೆ. .. ]. , ಏಪ್ರಿಲ್ 17, 2007.2007ರ ಮೇ 8ರಂದು ವಾಪಸು ಪಡೆದದ್ದು ಇದಕ್ಕೂ ಕೆಲವು ವಾರಗಳ ಮುನ್ನ ಯು.ಎಸ್ ಸೆನೇಟರುಗಳಾದ ಚಕ್ ಹೇಗೆಲ್ (-) ಮತ್ತು ರಿಚರ್ಡ್ ಡರ್ಬಿನ್ (-) ಯು.ಎಸ್. ಕಾಂಗ್ರೆಸ್‌ನಲ್ಲಿ ಪರಿಚಯಿಸಿದ ಕರಡು ಮಸೂದೆಯೊಂದರ ಪ್ರಕಾರ ಫೆಡರಲ್ ಗುಪ್ತಚರ ಏಜೆನ್ಸಿಗಳು ಹವಾಮಾನ ಬದಲಾವಣೆಗಳಿಂದುಂಟಾಗಬಹುದಾದ ಭದ್ರತಾ ಸವಾಲುಗಳ ಮೌಲ್ಯಮಾಪನ ಮಾಡಲೆಂದು ಒಂದು ಮಾಡಲು ಒಂದಾಗಬೇಕೆಂದು ತಿಳಿಸಲಾಗಿತ್ತು , 9, 2007. ನವೆಂಬರ್ 2007ರಂದು, ಮತ್ತು ಹೊಸದಾಗಿ ಸ್ಥಾಪಿಸಲಾದ ಎಂಬ ವಾಷಿಂಗ್ಟನ್ನಿನ ಎರಡು ಥಿಂಕ್ ಟ್ಯಾಂಕ್‌ಗಳು ಮೂರು ವಿವಿಧ ಜಾಗತಿಕ ತಾಪಮಾನ ಏರಿಕೆ ಪರಿಸ್ಥಿತಿಗಳಲ್ಲಿ ಪ್ರಪಂಚದಾದ್ಯಂತ ಉಂಟಾಗಬಹುದಾದ ಭದ್ರತಾ ವಿವಕ್ಷೆಗಳ ಬಗೆಗೆ ಒಂದು ವರದಿಯನ್ನು ಪ್ರಕಟಿಸಿದರು. ಈ ವರದಿಯು ಮೂರು ವಿವಿಧ ಪರಿಸ್ಥಿತಿಗಳ ಬಗ್ಗೆ ಪರ್ಯಾಲೋಚನೆ ಮಾಡುತ್ತದೆ - ಇವುಗಳಲ್ಲಿ ಎರಡು ಸುಮಾರು 30ವರ್ಷಗಳದ್ದಾಗಿದ್ದರೆ, ಇನ್ನೊಂದು ಸುಮಾರು 2100ರವರೆಗಿನ ಪರಿಸ್ಥಿತಿಯನ್ನು ಪರಿಗಣಿಸುತ್ತದೆ. ಅದರ ಸಾಮಾನ್ಯ ಫಲಿತಾಂಶಗಳ ಪ್ರಕಾರ ಪ್ರವಾಹಗಳು "...ಪ್ರಾದೇಶಿಕ ಮತ್ತು ರಾಷ್ಟ್ರೀಯ ಅನನ್ಯತೆಗಳಿಗೂ ಸವಾಲೊಡ್ಡುವ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರಗಳ ನಡುವೆ ಸಂಪನ್ಮೂಲಗಳಿಗಾಗಿ ಸಶಸ್ತ್ರ ಸಂಘರ್ಷಗಳು, ಉದಾಹರಣೆಗೆ ನೈಲ್ ಮತ್ತು ಅದರ ಉಪನದಿಗಳ ನಡುವೆ, ನಡೆಯಬಹುದು.." ಹಾಗೂ "ಏರುವ ಉಷ್ಣತೆ ಮತ್ತು ಸಮುದ್ರಮಟ್ಟಗಳಿಂದ ಉಂಟಾಗಬಹುದಾದ ದೊಡ್ಡ ತೊಂದರೆಯೆಂದರೆ ದೇಶಗಳ ಒಳಗೆ ಮತ್ತು ಈಗಿರುವ ಗಡಿರೇಖೆಗಳಲ್ಲಿ ನಡೆಯಬಹುದಾದ ದೊಡ್ಡಮಟ್ಟದ ಜನರ ವಲಸೆಹೋಗುವಿಕೆಗಳು.2009ರ ಒಂದು ಅಧ್ಯಯನವು ಏರುತ್ತಿರುವ ಉಷ್ಣತೆ ಮತ್ತು ಹಿಂಸೆಯ ನಡುವಿನ ಸಂಬಂಧವಿರುವುದೆಂಬ ಊಹೆಯನ್ನು ಪ್ರಶ್ನಿಸುತ್ತದೆ. ರಿಚರ್ಡ್ ಟಾಲ್ ಮತ್ತು ಸೆಬ್ಯಾಸ್ಟಿಯನ್ ವ್ಯಾಗ್ನರ್ 1000 ಮತ್ತು 2000ದವರೆಗೆ ಯುರೋಪಿನ ಹವಾಗುಣ ಹಾಗೂ ಸಂಘರ್ಷಗಳ ಬಗೆಗಿನ ದತ್ತಾಂಶವನ್ನು ಸಂಗ್ರಹಿಸಿದರು. ಅವರು 18ನೇ ಶತಮಾನದ ನಡುಭಾಗದವರೆಗೂ ಸರಾಸರಿ ಉಷ್ಣತೆ ಮತ್ತು ಸಂಘರ್ಷಗಳ ಸಂಖ್ಯೆಯ ನಡುವೆ ಗಮನಾರ್ಹವಾದ ಋಣಾತ್ಮಕ ಸಂಬಂಧವಿತ್ತೆಂದೂ, ಆದರೆ ಈ ಕಾಲಘಟ್ಟದ ನಂತರ ಈ ಸಂಬಂಧವು ತನ್ನ ಸಮತೋಲನವನ್ನು ಕಾಪಾಡಿಕೊಂಡು ಬಂದಿದೆಯೆಂಬ ನಿರ್ಣಯಕ್ಕೆ ಬಂದರು. ಟಾಲ್ ಮತ್ತು ವ್ಯಾಗ್ನರ್ ಔದ್ಯಮಿಕ ಕ್ರಾಂತಿಯ ವೇಳೆಗೆ ಕೃಷಿ ಮತ್ತು ಸಾರಿಗೆಯಲ್ಲಿ ಅಭಿವೃದ್ಧಿಯುಂಟಾದಾಗ ಯುದ್ಧ ಮತ್ತು ಶೈತ್ಯಪೂರ್ಣ ಹವಾಗುಣದ ನಡುವಿನ ಸಂಬಂಧ ಮುಗಿದುಹೋಯಿತೆಂದೂ ಎಂದು ವಾದಿಸಿದರು. ಸಲಹೆ ನೀಡುವ ಪ್ರಕಾರ ಅವರ ಅಧ್ಯಯನದಿಂದ ಹವಾಮಾನದಿಂದ ಉಂಟಾಗುವ ಸಂಘರ್ಷಗಳನ್ನು ಬೆಳೆ ಅಭಿವೃದ್ಧಿಯ ಪ್ರಕ್ರಿಯೆಯಿಂದ ಗಣನೀಯವಾಗಿ ಕಡಿಮೆಗೊಳಿಸಬಹುದು. == ಉಲ್ಲೇಖಗಳು ==